ಜಿಲ್ಲೆ

ಎಳವೆಯಲ್ಲಿಯೇ ಮೊಳಕೆ ಒಡೆಯಬೇಕು ಆತ್ಮಭಿಮಾನದ ಕಿಚ್ಚು

ಕೋಟ: ವಿದ್ಯಾಗಿರಿ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಿತು.

ಕುಂಭಾಶಿಯ ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ಪ್ರತಿಕ್ ಟಿ.ಆರ್. ಮಾತನಾಡಿ ಎಳವೆಯಲ್ಲಿ ನನ್ನ ದೇಶ ಎಂಬ ಪ್ರೀತಿ ಮೂಡಿದಾಗ ದೇಶಾಭಿಮಾನ ಮೂಡುತ್ತದೆ. ದೇಶದಲ್ಲಿನ ವಿದ್ಯಾವಂತರು ಉದ್ಯೋಗಕ್ಕಾಗಿ ಅನ್ಯ ದೇಶಕ್ಕೆ ವಲಸೆ ಹೋಗದೆ, ಇಲ್ಲಿಯೇ ಉದ್ಯೋಗವನ್ನು ನಡೆಸಿ, ನಮ್ಮ ದೇಶ ರಕ್ಷಣೆಯ ಕಾರ್ಯದಲ್ಲಿ ಆರ್ಥಿಕತೆಯ ಅಭಿವೃದ್ಧಿಗೆ ಸಹಕರಿಸಿದಾಗ ಮಾತ್ರ ದೇಶದ ಬಲ ವೃದ್ಧಿಯಾಗುವುದು ಎಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಬೆಟ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸಂಚಾಲಕ ಕಮಲಾಕ್ಷ ಪೈ, ಮುಖ್ಯಶಿಕ್ಷಕ ಹರ್ಷ ಕೋಟೇಶ್ವರ, ಆಡಳಿತ ಮಂಡಳಿ ಸದಸ್ಯರು, ಪಾಲಕರು, ಹಿರಿಯ ವಿದ್ಯಾರ್ಥಿಗಳು, ಮಾತಾಜಿ ವೃಂದದವರು, ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿ ತನ್ಮಯ್ ಸ್ವಾಗತಿಸಿದರು. ಪ್ರಣವ ವಂದಿಸಿದರು. ಅನ್ವಿತಾ ನಿರೂಪಿಸಿದರು.