ಹೆಬ್ರಿ: ಬೆಂಕಿ ಅವಘಡ ಸಹಿತ ಅಪಾಯಕಾರಿ ಹಾಗೂ ತುರ್ತು ಸನ್ನಿವೇಶಗಳಲ್ಲಿ ತುರ್ತು ಸ್ಪಂದಿಸಬೇಕಾದ ಮಹತ್ತರ ಜವಾಬ್ದಾರಿ ಅಗ್ನಿಶಾಮಕ ದಳದ ಮೇಲಿದೆ ಎಂದು ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನೀಸ್ ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಕಾರ್ಕಳ ಅಗ್ನಿ ಶಾಮಕದಳ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಹಾಗೂ ಜೀವನ ಕೌಶಲ ಕಾರ್ಯಾಗಾರದಲ್ಲಿ ಮಾತನಾಡಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಮಾತನಾಡಿ, ಜೀವ ಪಣಕ್ಕಿಟ್ಟು ಅಗ್ನಿ ಅವಘಡಗಳನ್ನು ತಡೆಯುವ ಅಗ್ನಿಶಾಮಕ ದಳದ ಕೊಡುಗೆ ಸಮಾಜಕ್ಕ ಅಪಾರವಾಗಿದೆ ಎಂದು ಶ್ಲಾಘಿಸಿದರು.
ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಸಿಅಗ್ನಿಶಾಮಕ ಸಿಬ್ಬಂದಿ, ಉಪನ್ಯಾಸಕರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ್ ಕುಮಾರ್ ಸ್ವಾಗತಿಸಿದರು. ಐಕ್ಯುಎಸಿ ಸಂಚಾಲಕ ಡಾ.ಗಣೇಶ ಎಸ್. ವಂದಿಸಿದರು.