ಅಳವಂಡಿ ಸಮೀಪದ ಮೋರನಹಳ್ಳಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೋತ್ಸವ ನಿಮಿತ್ತ ಶ್ರೀ ದೇವಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಜರುಗಿತು. ಪ್ರಮುಖರಾದ ಮಲ್ಲೇಶಪ್ಪ, ಅಂದಪ್ಪ, ಬರಮಪ್ಪ, ಹನುಮಂತ, ದೇವಪ್ಪ, ಶಿವಪ್ಪ ಇತರರಿದ್ದರು. 
ಜಿಲ್ಲೆ

ಶ್ರೀ ದೇವಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಅದ್ದೂರಿ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಸಮೀಪದ ಮೋರನಹಳ್ಳಿ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರೋತ್ಸವ ನಿಮಿತ್ತ ಶ್ರೀ ದೇವಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಹಾಗೂ ಗಂಗಾಪೂಜೆ ಬುಧವಾರ ಜರುಗಿತು.

ಬೆಳಗ್ಗೆ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ, ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಮಹಿಳೆಯರ ಕಳಸ, ಕುಂಭ ಹಾಗೂ ಜನಪದ ವಾದ್ಯಮೇಳದೊಂದಿಗೆ ಶ್ರೀ ದೇವಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಮೂಲಕ ಗಂಗಾಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ದೇವಪ್ಪ, ನಾಗಪ್ಪ, ವೆಂಕಟೇಶ ಬಗನಾಳ, ದೇವಪ್ಪ ಮಾಗಳದ, ಶಿವು ಮೋರನಾಳ, ಹನುಮಂತಪ್ಪ ಸಾಹುಕಾರ, ದೇವಪ್ಪ, ಚಂದ್ರಪ್ಪ ಹುಳ್ಳಿ, ಅಂಬಣ್ಣ, ಈರಪ್ಪ ಅಣಬಿ, ಬಸವರಾಜ ಬಿನ್ನಾಳ, ಬೀಮು ಹೊರಪೇಟಿ, ಮಂಜಪ್ಪ ಸಂಗಟಿ, ವೆಂಕಟೇಶ ಪೊಲೀಸ್‌ಪಾಟೀಲ್, ದೇವಪ್ಪ ಹುಲಗಪ್ಪನವರ ಇತರರಿದ್ದರು.