ಜಿಲ್ಲೆ

ಚಿನ್ನಾಭರಣ ಪಡೆದು ವಂಚಿಸಿದಾತ ಸೆರೆ

ಕಾಸರಗೋಡು: ಮಹಿಳೆಯೊಂದಿಗೆ ಪ್ರೀತಿಯ ಸೋಗಿನಲ್ಲಿ ಪರಿಚಯಮಾಡಿಕೊಂಡು, ಆಕೆಯಿಂದ ಹತ್ತು ಪವನಿನ ಚಿನ್ನಾಭರಣ ಪಡೆದು, ನಂತರ ವಾಪಸ್​ ನೀಡದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ಮಾರ್ಕೆಟ್​ ಸನಿಹದ ಕಾಟಿಕುಳಂ ನಿವಾಸಿ, ಯುವ ಕಾಂಗ್ರೆಸ್​ ನೇತಾರ ಶನೀದ್​ ಎಂಬಾತನನ್ನು ಕೋಯಿಕ್ಕೋಡ್​ ವೈದ್ಯಕಿಯ ಕಾಲೇಜು ಠಾಣಾ ಪೊಲೀಸರು ಬಂಧಿಸಿದ್ದಾರೆ. ವೈದ್ಯಕಿಯ ಕಾಲೇಜು ಆಸ್ಪತ್ರೆ ಆಸುಪಾಸಿನ ಮಹಿಳೆಯನ್ನು ನಕಲಿಫೇಸ್​ ಬುಕ್​ ಮೂಲಕ ಪರಿಚಯಮಾಡಿಕೊಂಡು, ಪ್ರೀತಿಸುವುದಾಗಿ ತಿಳಿಸಿ ಆಕೆಯಿಂದ ಹತ್ತು ಪವನ್​ ಚಿನ್ನಾಭರಣ ಪಡೆದಿದ್ದ. ನಂತರ ಚಿನ್ನ ವಾಪಸ್​ ನೀಡದೆ ವಂಚಿಸಿರುವ ಬಗ್ಗೆ ಮಹಿಳೆ ಪೊಲೀಸ್​ ಠಾಣೆಗೆ ನೀಡಿದ ದೂರಿನನ್ವಯ ಈತನನ್ನು ಬಂಧಿಸಲಾಗಿದೆ.