ಜಿಲ್ಲೆ

ರಾಜ್ಯದಲ್ಲಿ ಉದ್ಯಾನವನಗಳಿನ್ನು ಸಾರ್ವಜನಿಕರಿಗೆ ಮುಕ್ತ

lakshmihegde

ಬೆಂಗಳೂರು: ಕರೊನಾ ಲಾಕ್​ಡೌನ್​ಗಳೆಲ್ಲ ಕಳೆದು ಸದ್ಯ ಅನ್​ಲಾಕ್​-4 ಪ್ರಕ್ರಿಯೆ ಜಾರಿಯಲ್ಲಿದೆ. ಈ ಹಂತದಲ್ಲಿ ಕಂಟೇನ್​​ಮೆಂಟ್​ ವಲಯಗಳನ್ನು ಹೊರತುಪಡಿಸಿ, ಉಳಿದ ವಲಯಗಳಲ್ಲಿ ಸಾರ್ವಜನಿಕ ಉದ್ಯಾನವನಗಳು, ಉದ್ಯಾನವನದೊಳಗಿನ ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಕಲ್ಪಿಸಿ, ಸರ್ಕಾರ ಆದೇಶ ಹೊರಡಿಸಿದೆ.

ಸದ್ಯ ಕರೊನಾ ಹೆಚ್ಚಾಗಿದ್ದು ಕಂಟೇನ್​ಮೆಂಟ್​ ಝೋನ್​ಗಳೆಂದು ಗುರುತಿಸಲ್ಪಟ್ಟ ಸ್ಥಳಗಳಲ್ಲಿರುವ ಉದ್ಯಾನವನಗಳು ಹಾಗೇ ಬಂದ್​ ಇರುತ್ತವೆ. ಉಳಿದೆಲ್ಲ ಕಡೆ ಲಾಕ್​​ಡೌನ್​ಗೂ ಪೂರ್ವದಲ್ಲಿದ್ದಂತೆ ಉದ್ಯಾನವನಗಳಿಗೆ ಸಾರ್ವಜನಿಕರು ಇನ್ನು ಭೇಟಿ ಕೊಡಬಹುದಾಗಿದೆ. ಆದರೆ ಕೊವಿಡ್​-19 ನಿಯಂತ್ರಣಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.

ಕರೊನಾ ಅನ್​ಲಾಕ್​-4 ಮಾರ್ಗಸೂಚಿಗಳು ಸೆಪ್ಟೆಂಬರ್​ 30ರವರೆಗೆ ಜಾರಿಯಲ್ಲಿದ್ದು, ನಿಯಮಗಳ ಪಾಲನೆ ಕಡ್ಡಾಯವಾಗಿದೆ.