ಬೈಂದೂರು: ಸವಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡು ಬಂದಂತಹ ಇಂತಹ ಹಲವಾರು ಸಂಟನೆ ಒಟ್ಟಾಗಿ ಒಂದು ಅದ್ಭುತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜತೆಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ವಾರ್ಗದರ್ಶನ ನೀಡುತ್ತಿರುವುದು ಶ್ಲಾನೀಯ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಜೆಸಿಐ ಉಪ್ಪುಂದ ಸುಪ್ರೀಂ, ಲಯನ್ಸ್ ಕ್ಲಬ್ ನಾವುಂದ, ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಬೈಂದೂರು ತಾಲೂಕು ಎಸ್‌ಡಿಎಂ ಸಮನ್ವಯ ವೇದಿಕೆ ಇವರ ಸಹಯೋಗದಲ್ಲಿ ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸನ್ಮಾನ ಮತ್ತು ಕ್ರೀಡಾ ಸ್ಪರ್ಧೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೆಸಿಐ ಉಪ್ಪುಂದ ಸುಪ್ರೀಂ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಆಟೋಟ ಸ್ಪರ್ಧಾ ವಿಜೇತರನ್ನು, ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕ ಗಿರೀಶ್ ಶ್ಯಾನುಭಾಗ್ ಅವರಿಗೆ ಗುರುವಂದನೆ ಮೂಲಕ ಗೌರವಿಸಲಾಯಿತು.
ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ, ಬಿಇಒ ನಾಗೇಶ ಕೆ.ನಾಯ್ಕ, ಗಂಗೊಳ್ಳಿ ರೋಟರಿ ಅಧ್ಯಕ್ಷ ಕೃಷ್ಣ ಪೂಜಾರಿ, ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ನಿತ್ಯಾನಂದ ಆಚಾರ್ಯ, ಮುಖ್ಯಶಿಕ್ಷಕ ಮಂಜು ಎಂ.ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಖಾರ್ವಿ, ಸರೋಜಾ ಎಂ., ಹುಸೈನ್ ಹೈಕಾಡಿ, ಪದ್ಮನಾಭ ಹೆಬ್ಬಾರ್, ರೇಖಾ ಗಣೇಶ್ ಹೊಸಾಡು ಇದ್ದರು. ಜೆಸಿಐ ಸುಪ್ರಿಂ ನಿಕಟಪೂರ್ವಾಧ್ಯಕ್ಷೆ ಸುವಾ ಆಚಾರ್ ನಿರೂಪಿಸಿದರು.