ಜಿಲ್ಲೆ

ಬಡವರ ಏಳಿಗೆ ಯೋಜನೆ ಉದ್ದೇಶ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ರಾಜ್ಯಾದ್ಯಂತ 13 ಲಕ್ಷ ಬಡವರ ಗೃಹ ಉದ್ದೇಶಿತ ಚಟುವಟಿಕೆಗಳಿಗೆ ಬ್ಯಾಂಕಿನ ಮೂಲಕ ಸಹಕಾರ, ಸ್ವಉದ್ಯೋಗಕ್ಕೆ ಹಾಗೂ ಕೃಷಿ ಅಭಿವೃದ್ಧಿ ಕಾರ್ಯಗಳಿಗೆ ಅರ್ಥಿಕ ನೆರವು, ಗ್ರಾಮೀಣ ಭಾಗದಲ್ಲಿರುವ 60 ಸಾವಿರ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಒದಗಿಸುವ ಮೂಲಕ ಬಡವರ ಬದುಕಿನ ಏಳಿಗೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ನಾರಾವಿ ವಲಯದಲ್ಲಿ ನೂತನವಾಗಿ ರಚನೆಗೊಂಡಿರುವ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ವೇಣೂರು ವಲಯದ ಜನ ಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಮೋಹನ್ ಅಂಡಿಂಜೆ, ಚಂದ್ರನಾಥ ಸ್ವಾಮಿ ಜಿನ ಬಸದಿ ನಾರಾವಿಯ ಆಡಳಿತ ಮೊಕ್ತೇಸರ ನಿರಂಜನ ಆಜ್ರಿ ರಾಮೇರಗುತ್ತು, ಜನ ಜಾಗೃತಿ ವೇದಿಕೆ ನಾರಾವಿ ವಲಯದ ಅಧ್ಯಕ್ಷ ನಿತ್ಯಾನಂದ ನಾವರ, ಉಡುಪಿ ವಿಭಾಗ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಮರೊಡಿ ಗ್ರಾಪಂ ಅಧ್ಯಕ್ಷ ರತ್ನಾಕರ್ ಬುನ್ನು, ಶ್ರೀ ಮಹೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಪ್ರಗತಿಪರ ಕೃಷಿಕ ರತ್ನಾಕರ್ ಭಟ್, ಉದ್ಯಮಿ ವಸಂತ್ ಭಟ್ ನೂತನ ವಲಯ ಅಧ್ಯಕ್ಷ ಶೇಖರ್ ಹೆಗ್ಡೆ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು, ವಲಯ ಮೇಲ್ವಿಚಾರಕಿ ದಮಯಂತಿ ವರದಿ ಮಂಡಿಸಿದರು, ನಿಕಟ ಪೂರ್ವ ವಲಯ ಅಧ್ಯಕ್ಷ ಯಶೋಧರ ಬಂಗೇರ ನಿರೂಪಿಸಿದರು. ಕೊಕ್ರಾಡಿ ಸಾವ್ಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಶಿಧರ್ ವಂದಿಸಿದರು.

40 ವರ್ಷದ ಹಿಂದೆ ಮನೆಯ ಆರ್ಥಿಕ ಚಿತ್ರಣ ಯಾವ ರೀತಿಯಲ್ಲಿ ಇತ್ತು, ಯೋಜನೆಯ ಮೂಲಕ ಯಾವ ಮಟ್ಟದಲ್ಲಿ ಸುಧಾರಣೆಯಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸಬೇಕು. ಗುಂಪಿನ ಹೊಣೆಗಾರಿಕೆ ಎಲ್ಲ ಸದಸ್ಯರದ್ದು. ಅಪತ್ಕಾಲದಲ್ಲಿ ನಮ್ಮನ್ನು ಗುಂಪುಗಳು ನಮ್ಮನ್ನು ರಕ್ಷಿಸುತ್ತವೆ.

- ಮೋಹನ್ ಅಂಡಿಂಜೆ ವೇಣೂರು ವಲಯ ಅಧ್ಯಕ್ಷ