ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಳೆಗಾಲದ ಆರಂಭದಲ್ಲೇ ಬಿದ್ದಿರುವ ಹೊಂಡ ಗುಂಡಿಗಳು.  
ಜಿಲ್ಲೆ

ಅಪಾಯಕ್ಕೆ ಬಾಯ್ತೆರೆದಿದೆ ರಾಷ್ಟ್ರೀಯ ಹೆದ್ದಾರಿ

Karthika K.S

ಗಂಗೊಳ್ಳಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ಬಾಯ್ದೆರೆದಿದ್ದು, ಹಲವು ಕಡೆಗಳಲ್ಲಿ ಹೊಂಡ ಗುಂಡಿಗಳು ನಿರ್ವಾಣವಾಗಿದೆ.

ಕುಂದಾಪುರದಿಂದ ಮರವಂತೆ ತನಕ ಹೊಸದಾಗಿ ನಿರ್ವಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲ ಪೂರ್ವದಲ್ಲಿ ಹೊಂಡ ಬಿದ್ದ ಕಡೆಗಳಲ್ಲಿ ಅವೈಜ್ಞಾನಿಕವಾಗಿ ಮುಚ್ಚಿ ಕೇವಲ ತೇಪೆ ಹಾಕುವ ಕೆಲಸ ವಾತ್ರ ನಡೆದಿದ್ದರೆ, ಕೆಲವು ಕಡೆ 150 ಮೀಟರ್ ಮರು ಡಾಂಬರೀಕರಣ ನಡೆಸಲಾಗಿತ್ತು. ಇದೀಗ ಒಂದೇ ಮಳೆಗೆ ರಾಷ್ಟ್ರೀಯ ಹೆದ್ದಾರಿ ಜರ್ಜರಿತವಾಗಿದ್ದು, ಹಾಕಿರುವ ಡಾಂಬರು ಕಿತ್ತು ಹೋಗಿ ಮತ್ತೆ ಪುನಃ ಹೊಂಡ ಗುಂಡಿಗಳು ಕಾಣಿಸಿಕೊಳ್ಳುತ್ತಿದೆ. ಇದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ.

ಹೆದ್ದಾರಿಯಲ್ಲಿ ಕಾಣಿಸಿಕೊಂಡಿರುವ ಹೊಂಡಗಳು ಅಪಾಯಕಾರಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಇದೆ. ಲು ಮತ್ತು ಭಾರಿ ವಾಹನಗಳು ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಅಪಘಾತವಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕವೂ ಅದೇ ಸ್ಥಳದಲ್ಲಿ ಮತ್ತೆ ಹೊಂಡ ಗುಂಡಿಗಳ ಸಮಸ್ಯೆ ಉದ್ಭವಿಸುತ್ತಿರುವುದು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ.

ಕಳೆದ ಮಳೆಗಾಲದಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ್ಯುಕೂಪಗಳು ನಿರ್ವಾಣವಾಗಿತ್ತು. ತಲ್ಲೂರು ಸಮೀಪದ ರಾಜಾಡಿ ಸೇತುವೆ ಬಳಿ ರಸ್ತೆ ಕುಸಿಯುತ್ತಿದೆ. ಹೆದ್ದಾರಿ ಮಧ್ಯದಲ್ಲಿ ಚರಂಡಿ ಆಕಾರದಲ್ಲಿ ಕುಸಿದಿದೆ. ಈ ಸಮಸ್ಯೆಗಳ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಗಮನ ಸೆಳೆಯಲಾಗಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಅಸಡ್ಡೆಯಿಂದ ಈ ಬಾರಿಯೂ ಮಳೆಗಾಲದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ.

ಜನಪ್ರತಿನಿಧಿಗಳ ಮೌನ

ಕುಂದಾಪುರದಿಂದ ಬೈಂದೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಆಗರವಾಗಿದ್ದು, ಪೂರ್ಣಗೊಂಡು ಐದು ವರ್ಷ ಕಳೆದಿದ್ದರೂ ಈವರೆಗೆ ಸಂಪೂರ್ಣವಾಗಿ ನವೀಕರಣಗೊಂಡಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಹೊಂಡ ಗುಂಡಿಗಳು ಬಿದ್ದು ಅನೇಕ ಅವಡಗಳು ನಡೆಯುತ್ತಿದೆ. ಇಷ್ಟಾದರೂ ಈ ಭಾಗದ ಸಂಸದರು, ಶಾಸಕರು ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.