ಮಾಳಪ್ಪ ಮೇತ್ರಿ 
ಜಿಲ್ಲೆ

ರೌಡಿಶೀಟರ್ ಮಾಳಪ್ಪ ಮೇತ್ರಿ ಬರ್ಬರ ಹತ್ಯೆ

ಆಲಮೇಲ: ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ಪಟ್ಟಣದ ರೌಡಿಶೀಟರ್ ಮಾಳಪ್ಪ ಯಮನಪ್ಪ ಮೇತ್ರಿಯನ್ನು (40) ಮಂಗಳವಾರ ಮಧ್ಯಾಹ್ನ ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕೊಲೆಗೆ ಕಾರಣ, ಹತ್ಯೆ ಮಾಡಿದವರು ಯಾರು ಎನ್ನುವುದು ತಿಳಿದು ಬಂದಿಲ್ಲ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊಲೆಯಾದ ಮಾಳಪ್ಪ ಮೇತ್ರಿ ಮೇಲೆ ಆಲಮೇಲ, ಸಿಂದಗಿ, ಇಂಡಿ, ಕಲಬುರಗಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ ಹಾಗೂ ಅಕ್ರಮವಾಗಿ ಶಸಾಸ ಸಂಗ್ರಹ ಸೇರಿ ಹಲವಾರು ಪ್ರಕರಣಗಳು ದಾಖಲಾಗಿವೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ, ಇಂಡಿ ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ, ಸಿಪಿಐ ಡಿ.ಹುಲುಗಪ್ಪ, ಪಿಎಸ್‌ಐ ಕುಮಾರ ಹಾಡಕಾರ ಭೇಟಿ ನೀಡಿದರು.