ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆ ಅಂಗವಾಗಿ ಪರಾಕ್ರಮ ದಿವಸ್ ಆಚರಣೆಯಲ್ಲಿ ಹೈಸ್ಕೂಲ್ ವಿಭಾಗ ಗಣಿತ ಶಿಕ್ಷಕಿ ಪಂಚಮಿ ಮಾತನಾಡಿದರು. 
ಜಿಲ್ಲೆ

ಸ್ವಾತಂತ್ರ್ಯ ಕಲ್ಪನೆ ಭಾರತೀಯರಿಗೆ ಕೊಡುಗೆ

ಹೆಬ್ರಿ: ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಂಡು ಹಲವಾರು ಸಮಸ್ಯೆ ಎದುರಿಸಿದ್ದರು, ದಿಟ್ಟತನದಿಂದ ವಿದೇಶದಲ್ಲಿ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಥಮ ಸ್ವಾತಂತ್ರೃ ಕಲ್ಪನೆ ಭಾರತೀಯರಿಗೆ ಕಟ್ಟಿಕೊಟ್ಟವರು ಸುಭಾಷ್ ಚಂದ್ರ ಬೋಸ್. ಅವರ ಮರಣ ಇಂದಿಗೂ ಬಗೆಹರಿಸಲಾಗದ ಕಗ್ಗಂಟಾಗಿ ಉಳಿದಿದೆ ಎಂದು ಅಮೃತ ಭಾರತಿ ವಿದ್ಯಾಲಯ ಹೈಸ್ಕೂಲ್ ವಿಭಾಗ ಗಣಿತ ಶಿಕ್ಷಕಿ ಪಂಚಮಿ ಹೇಳಿದರು.

ಹೆಬ್ರಿ ಅಮೃತ ಭಾರತಿ ವಿದ್ಯಾಲಯ ದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಪರಾಕ್ರಮ ದಿವಸ್ ಆಚರಣೆ ಉದ್ಘಾಟಿಸಿ ಮಾತನಾಡಿದರು. ಅಮೃತ ಭಾರತಿ ಪ್ರಾಥಮಿಕ ವಿಭಾಗ ಮುಖ್ಯಸ್ಥೆ ಪ್ರತಿಮಾ ಉಪಸ್ಥಿತರಿದ್ದರು.