ಸಸಿಹಿತ್ಲು ಮುಂಡಾ ಪ್ರದೇಶದ ಶಾರದಾ ಮೋಹನ್‌ರವರ ಹೆಂಚಿನ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಮನೆ, ಕಬ್ಬಿಣದ ಕಪಾಟಿನ ಬಟ್ಟೆ, ದಾಖಲೆ ಪತ್ರಗಳು ಸಂಪೂರ್ಣ ಭಸ್ಮವಾಗಿದೆ. 
ಜಿಲ್ಲೆ

ಮನೆಗೆ ಬೆಂಕಿ ತಗುಲಿ ಸಂಪೂರ್ಣ ನಾಶ

Santhosh Krishna K M

ಹಳೆಯಂಗಡಿ: ಸಸಿಹಿತ್ಲು ಮುಂಡಾ ಪ್ರದೇಶದ ಬಳಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.

ಸಸಿಹಿತ್ಲು ಮುಂಡಾ ಬಳಿಯ ನಿವಾಸಿ ಶಾರದಾ ಮೋಹನ್ ಅವರು ಮಗ ಹಾಗೂ ತಮ್ಮನೊಡನೆ ಮನೆಯಲ್ಲಿ ವಾಸಿಸುತ್ತಿದ್ದು, ಕೂಲಿ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗಿದ್ದರು. ಈ ಸಂದರ್ಭ ತಮ್ಮ ಹೆಂಚಿನ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಮನೆ ಸಂಪೂರ್ಣ ಭಸ್ಮವಾಗಿದೆ. ಮನೆಯಲ್ಲಿ ಕಬ್ಬಿಣದ ಕಪಾಟಿನಲ್ಲಿದ್ದ ಬಟ್ಟೆ, ದಾಖಲೆಗಳು ಹೊತ್ತಿ ಭಸ್ಮವಾಗಿದೆ.

ಬೆಂಕಿ ಹರಡುತ್ತಲೇ ಸ್ಥಳೀಯರ ಮಾಹಿತಿಯಿಂದ ಕೂಡಲೇ ಕಾರ್ಯಪ್ರವೃತ್ತರಾದ ಹಳೆಯಂಗಡಿಯ ಜೈಕೃಷ್ಣ ಕೋಟ್ಯಾನ್‌ರವರು ಟ್ಯಾಂಕರ್ ನೀರಿನ ಮೂಲಕ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ಹರಡಿ ಇತರ ಮನೆಗಳಿಗೂ ಅನಾಹುತ ಆಗದಂತೆ ತಡೆದಿದ್ದಾರೆ. ಬಡ ಕುಟುಂಬದ ಶ್ಯಾಮಲಾ ಮೋಹನ್ ಅವರ ಮನೆ ಸಂಪೂರ್ಣ ನಾಶವಾಗಿದ್ದು, ಸೂರು ಕಳೆದುಕೊಂಡ ಕುಟುಂಬ ದಿಕ್ಕು ತೋಚದಂತಾಗಿದೆ.