ಸುಳ್ಯ: ತಾಲೂಕಿನ ಬೆಳ್ಳಾರೆ ಗ್ರಾಮದ ನವಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಬರೆ ಕುಸಿದು ಬಿದ್ದಿದ್ದು, ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ. ಜಯರಾಮ ಉಮಿಕ್ಕಳ ಎಂಬುವರ ಮನೆ ಎದುರಿನ ಬರೆ ಕುಸಿದಿದ್ದು, ಮನೆಗೆ ಅಪಾಯ ಎದುರಾಗಿದೆ. ಮಣ್ಣು ಜರಿದು ರಸ್ತೆ ಗೆ ಬಿದ್ದ ಪರಿಣಾಮ ಚಾವಡಿ ಬಾಗಿಲು ಕಡೆಗೆ ಹೋಗುವ ರಸ್ತೆ ಕೂಡ ಬಂದ್ ಆಗಿತ್ತು. ನಂತರ ಮಣ್ಣು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಯಿತು.