ಬ್ರಹ್ಮಾವರ: ಕೇಂದ್ರ ಸರ್ಕಾರ ಕಾರ್ಮಿಕರ ಅನೇಕ ಹೋರಾಟದ ಹಕ್ಕುಗಳನ್ನು ಕಸಿದಿದೆ. ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಕೂಡಾ ಬಿಜೆಪಿಗಿಂತ ಭಿನ್ನವಾಗಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ವಸತಿ ಶಾಲೆಯ ಹೆಸರಿನ ನೆಪದಲ್ಲಿ ಕಾರ್ಮಿಕರ ಹಣವನ್ನು ಕಬಳಿಸಿದೆ ಎಂದು ಬೆಂಗಳೂರು ಸಿಡಬ್ಯೂಎಫ್‌ಐ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಭಾನುವಾರ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ವಾಣ ಕಾರ್ಮಿಕರ ಸಂ ಸಿಐಟಿಯು ವತಿಯಿಂದ ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆ, ಕಾರ್ಮಿಕ ನೀತಿ ಖಂಡಿಸಿ ಬ್ರಹ್ಮಾವರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಗಾರ, ಜತೆ ಕಾರ್ಯದರ್ಶಿ ರೋನಾಲ್ಡ್ ರಾಜೇಶ್, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂ ಅಧ್ಯಕ್ಷ ಶೇಖರ ಬಂಗೇರಾ, ಕಾರ್ಯದರ್ಶಿ ಶಶಿಧರ ಗೊಲ್ಲ, ಖಚಾಂಚಿ ಗಣೇಶ್ ನಾಯಕ್ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.