ಆರ್ಡಿ: ಶೇಡಿಮನೆ ಸಮೀಪ ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕೆಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಗುರುಗಣಪತಿ ಪ್ರಾರ್ಥನೆ, ಪುಣ್ಯಾಹವಾಚನ, ಪ್ರಧಾನಹೋಮ, ಕಶಾಭಿಷೇಕ, ಚಂಡಿಕಾ ಹೋಮ, ವೇದಪಾರಾಯಣ, ಗಣಪತಿ ಹೋಮ, ಹಣ್ಣುಕಾಯಿ, ಹರಿವಾಣ ನೈವೇದ್ಯ, ತುಲಾಬಾರ ಸೇವೆ, ಉತ್ಸವ ಬಲಿ, ಮಹಾಪೂಜೆ, ರಾತ್ರಿ ಅರಸಮ್ಮಕಾನು ಶ್ರೀಪಂಚರತಿ ಮಹಿಳಾ ಭಜನಾ ಮಂಡಳಿ, ಶ್ರೀದುರ್ಗಾಂಬಾ ಭಜನಾ ಮಂಡಳಿಯವರಿಂದ ಶ್ರೀರಾಮ ಭಜನೆ, ಕುಂದಾಪುರ ಸ್ವರ್ಣನೂಪುರ ಯಕ್ಷಗಾನ ಮಂಡಳಿ, ಅಮಾಸೆಬೈಲು ಡ್ಯೂಯಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಪೌರಾಣಿಕ ಯಕ್ಷಗಾನ, ಶ್ರೀದೇವಿ ದರ್ಶನ, ಕಲ್ಕುಡ ದರ್ಶನ, ಶ್ರೀದೇವಿ ಮತ್ತು ಕಲ್ಕುಡ ಮುಖಾಮುಖಿ, ಕೆಂಡೋತ್ಸವ, ಕಲ್ಕುಡ ಮತ್ತು ಸತ್ಯದೇವತೆ ಸಿರಿ ಸಿಂಗಾರ ಕೋಲ, ರಂಗಪೂಜೆ, ದೇವಿ ದರ್ಶನ, ಭೂತಬಲಿ, ಮಹಾಪೂಜೆ ನಡೆಯಿತು.
ತಂತ್ರಿ ಗಿರೀಶ್ ಸೋಮಾಯಾಜಿ ಪಡುವಳ್ಳಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಚಂದ್ರಶೇಖರ ಶೆಟ್ಟಿ ಮೂಡುಬೈಲು, ಅರ್ಚಕ ನಾಗರಾಜ ಬಾಯರಿ ಗಂಗಡಬೈಲು, ಕಾರ್ಯದರ್ಶಿ ಸದಾನಂದ ಪೂಜಾರಿ, ಸದಸ್ಯ ನಾಗರಾಜ ಬಾಯರಿ, ಡಿ.ರಘುರಾಮ ಶೆಟ್ಟಿ ದುಗ್ಗನಮಕ್ಕಿ, ವಿಜಯಕುಮಾರ್ ಹೆಗ್ಡೆ ಸಾಂತನಮಕ್ಕಿ, ಶೇಖರ ಹೆಗ್ಡೆ ಕೆಳಅಗಳಿಬೈಲು, ಜಯಂತಿ ಶೆಟ್ಟಿ ಕೆರ್ಜಾಡಿ ಆರ್ಡಿ, ವಿಮಲ ಎಸ್.ಹೆಗ್ಡೆ ಬಡಾಬೈಲು ಭಕ್ತರು ಪಾಲ್ಗೊಂಡಿದ್ದರು.