ಜಿಲ್ಲೆ

ಸ್ಫೋಟಕ್ಕೀಡಾದ ಕಾರ್ಖಾನೆ ಅನಧಿಕೃತ; ಗುಟ್ಟಾಗಿ ಫ್ಯಾಕ್ಟರಿ ಆರಂಭಿಸಿದ್ದ ಮಾಲೀಕ ಪರಾರಿ..

Webdesk - Ravikanth

ಹುಬ್ಬಳ್ಳಿ: ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ ಹಾಗೂ ಸ್ಫೋಟಕ್ಕೆ ಒಳಗಾಗಿ, ನೌಕರರು ಗಂಭೀರ ಗಾಯಗೊಂಡಿರುವ ಕಾರ್ಖಾನೆ ಅನಧಿಕೃತ ಎಂಬದು ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿರುವ ಶಾಸಕ ಅರವಿಂದ್ ಬೆಲ್ಲದ್ ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಅವಘಡಕ್ಕೆ ಒಳಗಾಗಿರುವ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ದುರಂತದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಘಟನೆ ನಡೆಬಾರದಿತ್ತು ನಡೆದಿದೆ, ಈ ಫ್ಯಾಕ್ಟರಿ ಕೇವಲ 15 ದಿನದ ಹಿಂದಷ್ಟೆ ಆರಂಭವಾಗಿದೆ. ಈ ಫ್ಯಾಕ್ಟರಿ ಅನಧಿಕೃತವಾಗಿದ್ದು, ಯಾರಿಗೂ ತಿಳಿಯದೇ ಆರಂಭ ಮಾಡಲಾಗಿದೆ ಎಂಬುದನ್ನು ಅವರು ತಿಳಿಸಿದರು.

ಈ ಅವಘಡದಿಂದಾಗಿ ಫ್ಯಾಕ್ಟರಿ ಮಾಲೀಕ ತಬ್ಸುಮ್ ಶೇಕ್ ಹೆದರಿ ತಲೆಮರೆಸಿಕೊಂಡಿದ್ದಾನೆ. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯ ತಪ್ಪಿದೆ, ಹೀಗಾಗಿ ಹಲವರ ಪ್ರಾಣ ಉಳಿದಿದೆ. ಘಟನೆ ಕುರಿತಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

ರಕ್ಷಣೆಗೆ ಧಾವಿಸುತ್ತಿರುವ ಸಾರ್ವಜನಿಕರು