ಬೈಂದೂರು: ತಾಲೂಕು ಕಚೇರಿಗೆ ಬಂದು ಒಂದು ಅರ್ಜಿ ನೀಡಲು ಹೆದರುತ್ತಿದ್ದ ರೈತ ಇಂದು ಆಡಳಿತ ಸೌಧದ ಎದುರುಗಡೆ ನಿಂತು ನ್ಯಾಯಕ್ಕಾಗಿ ಹಸಿರುಶಾಲು ಬೀಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ ಅಂದರೆ ಅದು ರೈತರ ನೋವಿನ ಶಕ್ತಿ. ಕಳೆದ ಹತ್ತು ದಿನದಿಂದ ರೈತರು ಧರಣಿ ನಡೆಸುತ್ತಿದ್ದು, ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ರಾಜಕೀಯ ನಾಯಕರು ಪಕ್ಷಭೇದ ಮರೆತು ಕೈಜೋಡಿಸಬೇಕು. ರಾಜ್ಯಕ್ಕೆ ಬೈಂದೂರು ರೈತರ ಶಕ್ತಿ ತೋರಿಸುವ ಸಮಯ ಇದಾಗಿದೆ ಎಂದು ಹಿಂದು ಮುಖಂಡ, ವಕೀಲ ಆಕಾಶ ಪೂಜಾರಿ ಹೇಳಿದರು.
ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ ಧರಣಿ ಹತ್ತನೇ ದಿನದ ಹೋರಾಟದಲ್ಲಿ ಮಾತನಾಡಿದರು.
ರೈತ ನಾಯಕ ದೀಪಕ್‌ಕುವಾರ್ ಶೆಟ್ಟಿ ಮಾತನಾಡಿದರು. ಎಳಜಿತ್ ಕೆಕ್ಜೋಡು ಭಾಗದ ರೈತರು ಹತ್ತನೇ ದಿನದ ಧರಣಿ ನೇತೃತ್ವ ವಹಿಸಿದ್ದರು. ವೀರಭದ್ರ ಗಾಣಿಗ, ಅರುಣ್‌ಕುವಾರ ಶಿರೂರು, ನಾಗಪ್ಪ ಮರಾಠಿ ಹೊಸೂರು, ಚಂದ್ರ ಗಂಗಾನಾಡು, ಗಣಪ ಗಂಗಾನಾಡು ಮುಂತಾದವರು ಹಾಜರಿದ್ದರು.