ಉಚಿತ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಬೋರಲಿಂಗಯ್ಯ ಮಾತನಾಡಿದರು.  
ಜಿಲ್ಲೆ

ಶಿಕ್ಷಣವಂತರಿಂದ ಕಲೆ, ಕಲಾವಿದರ ಬೆಳವಣಿಗೆ

ಬ್ರಹ್ಮಾವರ: ಶಿಕ್ಷಣವಂತರು ಕಲೆಯತ್ತ ಆಸಕ್ತರಾದರೆ ಮಾತ್ರ ಕಲೆ ಹಾಗೂ ಕಲಾವಿದರ ಬೆಳವಣಿಗೆ ಸಾಧ್ಯ ಎಂದು ವಿಶ್ರಾಂತ ಕುಲಪತಿ ಬೋರಲಿಂಗಯ್ಯ ಹೇಳಿದರು.

ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಭೂಮಿಕಾ ಹಾರಾಡಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ 11ನೇ ವರ್ಷದ ಉಚಿತ ನಾಟಕೋತ್ಸವ ಬಣ್ಣ 2025ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ತಲ್ಲೂರು ಶಿವರಾಮ ಶೆಟ್ಟಿ ಮತ್ತು ಗಿರಿಜಾ ನೇತೃತ್ವದ ಟ್ರಸ್ಟ್ ವತಿಯಿಂದ ಬೋರಲಿಂಗಯ್ಯ ದಂಪತಿಯನ್ನು ಗೌರವಿಸಲಾಯಿತು.

ಅಂಬಲಪಾಡಿಯ ಡಾ.ವಿಜಯ ಬಲ್ಲಾಳ, ಗೋಪಾಲ್ ಸಿ.ಬಂಗೇರಾ, ಜ್ಞಾನ ವಸಂತ ಶೆಟ್ಟಿ, ಮುರಳಿ ಕಡೆಕಾರ್, ಆರ್.ಎಂ ಸಾಮಗ, ರಾಮ್ ಶೆಟ್ಟಿ, ರವಿ ಪೂಜಾರಿ ಉಪಸ್ಥಿತರಿದ್ದರು.