ಕಾಸರಗೋಡು: ಹೊಸದುರ್ಗ ಬಳಾಲ್ ಆರಿಂಕಲ್‌ಲ್ ನಿವಾಸಿ ಪ್ರಕಾಶನ್(35)ಎಂಬುವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕಾಶನ್ ಅವರು ನೇಣಿನಲ್ಲಿ ನೇತಾಡುತ್ತಿರುವುದನ್ನು ಕಂಡ ಮನೆಯವರು ತಕ್ಷಣ ಹಗ್ಗ ತುಂಡರಿಸಿ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಪ್ರಕಾಶನ್ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದರು.