ಕಂಪ್ಲಿಯಲ್ಲಿ ವಾಸವಿ ವಿಶ್ವರೂಪ ದರ್ಶನ (ಅಗ್ನಿಪ್ರವೇಶ) ನಿಮಿತ್ತ ಕನ್ಯಕಾಪರಮೇಶ್ವರಿ ದೇವಿಗೆ ಹೂಗಳಿಂದ ಅಲಂಕರಿಸಲಾಗಿತ್ತು. 
ಜಿಲ್ಲೆ

ವಾಸವಿ ದೇವಿ ಅಗ್ನಿಪ್ರವೇಶಿಸಿದ ದಿನ

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ವಾಸವಿ ಕನ್ಯಕಾಪರಮೇಶ್ವರಿ ತತ್ವಾದರ್ಶಗಳು ಮಾನವ ಜನಾಂಗಕ್ಕೆ ಆದರ್ಶವಾಗಿವೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಡಿ.ಮಂಜೇಶ್ ಹೇಳಿದರು.

ನಗರದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಾಸವಿ ವಿಶ್ವರೂಪ ದರ್ಶನ(ಅಗ್ನಿಪ್ರವೇಶ) ಪವಿತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಲೋಕ ಕಲ್ಯಾಣಾರ್ಥ ಕಲಿಯುಗದಲ್ಲಿ ಅಧರ್ಮ ಹಾಗೂ ದುಷ್ಕೃತ್ಯಗಳನ್ನು ಅಂತ್ಯಗೊಳಿಸಲು ವಾಸವಿ ಮಾತೆ ರಕ್ತಪಾತವಿಲ್ಲದೆ ಶಾಂತಿ, ಅಹಿಂಸೆ, ತ್ಯಾಗವನ್ನು ದಿವ್ಯ ಅಸ್ತ್ರಗಳನ್ನಾಗಿಸಿ ಕನ್ಯಕಾಪರಮೇಶ್ವರಿಯಾಗಿ ಅಗ್ನಿ ಪ್ರವೇಶ ಮಾಡಿದ ಪವಿತ್ರ ದಿನವಾಗಿದೆ ಎಂದರು.

ಶ್ರೀ ರಾಘವೇಂದ್ರಸ್ವಾಮಿ ಶಾಖಾಮಠದ ಅರ್ಚಕ ಕಿಶೋರಾಚಾರ್ ಪೌರೋಹಿತ್ಯದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ, ಗಂಗಾ ಭಗೀರಥ ಪೂಜೆ, ನವಗ್ರಹಸಹಿತ ಶ್ರೀ ಮಹಾಲಕ್ಷ್ಮೀ ಹೋಮ, ಅನ್ನಸಂತರ್ಪಣೆ ನೆರೆವೇರಿದವು. ಸಂಜೆ ಲಲಿತಾ ಸಹಸ್ರನಾಮ ಪಾರಾಯಣ, ಸಾಮೂಹಿಕ ಕುಂಕುಮಾರ್ಚನೆ, ಅಷ್ಠಾವದಾನ ಸೇವೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಧರ್ಮಕರ್ತ ವೈ.ಚಂದ್ರಮೋಹನ ಶ್ರೇಷ್ಠಿ, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಟಿ.ರಮಾ ವೆಂಕಟರಮಣ ಇತರರಿದ್ದರು.