ಜಿಲ್ಲೆ

ಗ್ರಾಮಗಳಿಂದ ದೇಶ ಬಲಿಷ್ಠ: ಡಾ.ಎಂ.ಮೋಹನ ಆಳ್ವ ಆಶಯ

ಗುರುಪುರ: ಗ್ರಾಮಗಳು ಬಲಿಷ್ಠವಾದರೆ ದೇಶ ಸಮರ್ಥಗುತ್ತದೆ. ಪ್ರಪಂಚದಲ್ಲೇ ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ ದೇಶ ಭಾರತ. ಇಲ್ಲಿ ಯುವಜನರ ಪಾಲು ಹೆಚ್ಚಿದೆ. ಯುವಜನರಿರುವ ಸಂಘ-ಸಂಸ್ಥೆಗಳಿಂದ ಗ್ರಾಮಗಳ ಬಲವರ್ಧನೆ ಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಗಂಜಿಮಠ ಹತ್ತಿರದ ನಾರಳ ಸಂಕೇಶದ ಕಲಾವರ್ಧಕ ಯುವಕ ಮಂಡಲದ ಸುವರ್ಣ ಮಹೋತ್ಸವ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಲಾದ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ರಮಾನಾಥ ರೈ, ಉದ್ಯಮಿಗಳಾದ ಗಣೇಶ್ ಭಟ್ ಮಂಗಳೂರು, ರಮೇಶ್ ಆಳ್ವ ಮುಂಬಯಿ, ಯುವಕ ಮಂಡಲದ ಹಿರಿಯ ಸದಸ್ಯ ರಘುನಾಥ ಸಾಮಾನಿ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಭಟ್, ಗಂಜಿಮಠ ಪಂಚಾಯಿತಿ ಅಧ್ಯಕ್ಷೆ ಮಾಲತಿ ಎಂ., ಯುವಕ ಮಂಡಲದ ಹಿರಿಯ ಸದಸ್ಯ ಎಸ್.ಮೊಹಮ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ಮಳಲಿ ಗಾಣಿಗ ಸಂಘದ ಅಧ್ಯಕ್ಷ ಕಾಂತಪ್ಪ ಸಪಲಿಗ, ಅಗರಿ ರಾಘವೇಂದ್ರ ರಾವ್, ಪ್ರಸನ್ನ ರಾವ್ ಕೈಕಂಬ, ಶಿವಪ್ರಸಾದ್ ಶೆಟ್ಟಿ, ವಿಘ್ನೇಶ್ ಭಟ್, ದಾಮೋದರ ಕುಲಾಲ್, ರಾಜೇಂದ್ರ ಮೇಂಡ ಮೊಗರು, ಜಯಾನಂದ ನಾಯ್ಕ, ಹೇಮಂತ ಶೆಟ್ಟಿ ನಾರಳ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ, ಯುವಕ ಮಂಡಲದ ಅಧ್ಯಕ್ಷ ನಾಗರಾಜ ಶೆಟ್ಟಿ ಮತ್ತಿತರರಿದ್ದರು.

ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಕಲಾಚೇತನ ಯುವತಿ ಮಂಡಲದ ಅಧ್ಯಕ್ಷೆ, ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಶೆಟ್ಟಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಂದ ದಿನಕರ ಭಂಡಾರಿ ಕಣಂಜಾರು ವಿರಚಿತ ‘ಪಿರ ಬನ್ನಗ’ ತುಳು ನಾಟಕ ಪ್ರದರ್ಶನಗೊಂಡಿತು.

ಸಾಧಕರಿಗೆ ಸನ್ಮಾನ

ಹಿರಿಯ ವೈದ್ಯ ಡಾ.ಶ್ರೀಪತಿ ಕಿನ್ನಿಕಂಬಳ, ಪಶುಸಂಗೋಪನಾ ಇಲಾಖೆ ನಿವೃತ್ತ ಸಿಬ್ಬಂದಿ ದಿನೇಶ್, ನೃತ್ಯಗುರು ವಿನೇಶ್, ಕೈಕಂಬ ಮೆಸ್ಕಾಂ ಉಪವಿಭಾಗದ ಹಿರಿಯ ಸಿಬ್ಬಂದಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಯುವಕ ಮಂಡಲದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.