ಜಿಲ್ಲೆ

ರಸ್ತೆ ಬದಿಯ ಅಡಕೆ ಕಂಬಕ್ಕೆ ಬೈಕ್ ಡಿಕ್ಕಿ

ಇಂದಿರಾ ಎನ್ ಕೆ

ಗಂಗೊಳ್ಳಿ: ರಸ್ತೆ ಬದಿ ಲೈಟಿಂಗ್ಸ್‌ಗೆ ಹಾಕಿದ್ದ ಅಡಕೆ ಮರದ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಗುಜ್ಜಾಡಿ ಎಂಬಲ್ಲಿ ನಡೆದಿದೆ. ಗಂಗೊಳ್ಳಿ ಗ್ರಾಮದ ಸುಧಾಕರ ಹಾಗೂ ನಾಗೇಶ ಗಾಯಗೊಂಡವರು. ಗಂಗೊಳ್ಳಿ ಕಡೆಯಿಂದ ತ್ರಾಸಿ ಕಡೆಗೆ ಹೋಗುತ್ತಿರುವಾಗ ಗುಜ್ಜಾಡಿ ಗ್ರಾಮದ ಬೆಣ್ಗೇರೆ ಕ್ರಾಸ್ ಬಳಿ ಈ ಅವಘಡ ನಡೆದಿದೆ. ಗಂಭೀರ ಗಾಯಗೊಂಡಿರುವ ಸಹಸವಾರ ನಾಗೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.