ಬೈಂದೂರು: ಬೈಂದೂರು ಹೋಲಿಕ್ರಾಸ್ ಚರ್ಚ್ ವಾರ್ಷಿಕ ಉತ್ಸವ ತೆರಾಲಿ ಹಬ್ಬ ಗುರುವಾರ ಜರುಗಿತು. ಕುಂದಾಪುರ ವಲಯ ಮುಖ್ಯ ಧರ್ಮಗುರು ಪಾವ್ಲ್ ರೇಗೋ ಪ್ರಧಾನ ಗುರುಗಳಾಗಿ ಬಲಿಪೂಜೆ ನೆರವೇರಿಸಿದರು. ದಾನಿಗಳಿಗೆ ಹಾಗೂ ಸೇವಾಕರ್ತರಿಗೆ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಹಿಂದಿನ ದಿನದ ಹಬ್ಬದ ಧಾರ್ಮಿಕ ವಿಧಿವಿಧಾನಗಳನ್ನು ಜೆಜ್ವಿತ್ ಧರ್ಮಗುರು ವಿಲ್ಸನ್ ಸಲ್ದಾನ, ಕೋಂಪ್ರಿ ಹಬ್ಬವನ್ನು ಬಸ್ರೂರಿನ ಮೆಲ್ವಿಲ್ ರೋಯ್ ಲೋಬೋ ನೆರವೇರಿಸಿದರು. ಉಡುಪಿ ಧರ್ಮಪ್ರಾಂತ್ಯ ಧರ್ಮಗುರುಗಳು, ಬೈಂದೂರಿನ ಸಹಾಯಕ ಧರ್ಮಗುರು ಜೊಸ್ವಿನ್ ಸಿಕ್ವೇರಾ, ಪ್ರಧಾನ ಪೋಷಕ ಸ್ಯಾಮುಯಲ್ ರೆಬೆರೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫರ್ನಾಂಡಿಸ್, ಆಯೋಗ ಸಂಯೋಜಕಿ ಅನಿತಾ ನಜ್ರೆತ್ ಉಪಸ್ಥಿತರಿದ್ದರು. ಚರ್ಚ್ ಧರ್ಮಗುರು ವಿನ್ಸೆಂಟ್ ಕುವೆಲ್ಲೊ ವಂದಿಸಿದರು.