ಜಿಲ್ಲೆ

ಸುಬ್ರಹ್ಮಣ್ಯ ಮಠದಲ್ಲಿ ಅನಂತನ ವ್ರತ, ತೆನೆ ವಿತರಣೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಅನಂತ ಚತುದರ್ಶಿ ಪ್ರಯುಕ್ತ ಅನಂತನ ವ್ರತ, ಯಮುನಾ ಪೂಜೆ, ಭಕ್ತರಿಗೆ ಹೊಸ ತೆನೆ ವಿತರಣೆ ಹಾಗೂ ಕದಿರು ಕಟ್ಟುವ ಕಾರ್ಯ ಶನಿವಾರ ನೆರವೇರಿತು.

ಕದಿರನ್ನು ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಮಠಕ್ಕೆ ಅರ್ಚಕ ಶ್ರೀಕರ ಉಪಾಧ್ಯಾಯರು ತಂದರು. ನಂತರ ಮಠದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಕದಿರು ಪೂಜೆಯನ್ನು ನರಸಿಂಹ ದೇವರ ಎದುರು ನೆರವೇರಿಸಿದರು. ದೇವರಿಗೆ ಕದಿರನ್ನು ಅರ್ಪಿಸಲಾಯಿತು. ಮಠದ ದೈವ ದೇವತೆಗಳ ಗುಡಿಗೆ ಕದಿರನ್ನು ಕಟ್ಟಲು ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸರಿಗೆ ಕದಿರು ನೀಡಿದರು. ಬಳಿಕ ಭಕ್ತರಿಗೆ ಸಕಲ ಸಮೃದ್ಧಿ ಲಭಿಸಲಿ ಎಂದು ಶ್ರೀಗಳು ಆಶೀರ್ವದಿಸಿ ಕದಿರು ವಿತರಿಸಿದರು.