ಮಾನ್ವಿಯ ತಹಸಿಲ್ ಕಚೇರಿಯಲ್ಲಿ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ತಹಸೀಲ್ದಾರ್ ರಾಜು ಪಿರಂಗಿ ಮಾತನಾಡಿದರು. ಟಿಎಚ್‌ಒ ಡಾ.ಚಂದ್ರಶೇಖರಯ್ಯಸ್ವಾಮಿ, ಬಿಇಒ ಚಂದ್ರಶೇಖರ ದೊಡ್ಡಮನಿ ಇದ್ದರು. 
ಜಿಲ್ಲೆ

ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ

ಮಾನ್ವಿ: ಮಕ್ಕಳಿಗೆ ಬರುವ ಕಾಯಿಲೆಗಳನ್ನು ತಡೆಗಟ್ಟಲು ಲಸಿಕೆ ಹಾಕಿಸುವುದು ಕಡ್ಡಾಯ ಎಂದು ತಹಸೀಲ್ದಾರ್ ರಾಜು ಪಿರಂಗಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

ಎಲ್ಲರ ಸಹಕಾರ ಅಗತ್ಯ

ಜನರ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಇಲಾಖೆಯ ಜತೆಗೆ ಎಲ್ಲರೂ ಸಹಕಾರ ನೀಡಿದಾಗ ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ ಮಾತನಾಡಿ, ತಾಲೂಕು ಆರೋಗ್ಯ ಇಲಾಖೆಯಿಂದ 12 ವರ್ಷದ ಒಳಗಿನ ಮಕ್ಕಳಿಗೆ ಗಂಭೀರ ಕಾಯಿಲೆಗಳು ಬರದಂತೆ 12 ಲಸಿಕೆಗಳನ್ನು ಹಾಕಲಾಗುತ್ತಿದೆ.

ಮಾನ್ವಿ, ಮಸ್ಕಿ, ಸಿರವಾರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 435 ಗರ್ಭಿಣಿ ಮಹಿಳೆಯರಿಗೆ, 0 ದಿಂದ 2 ವಷರ್ದೊಳಗಿನ 2634 ಮಕ್ಕಳಿಗೆ ಹಾಗೂ ಮಾನ್ವಿ ಪಟ್ಟಣದ ವ್ಯಾಪ್ತಿಯಲ್ಲಿನ 2 ರಿಂದ 5 ವಷರ್ದೊಳಗಿನ 401 ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಲಾಗಿದೆ ಎಂದರು.


ಮಕ್ಕಳಿಗೆ ಲಸಿಕೆಯನ್ನು ಹಾಕಲು 12 ಸಂಚಾರಿ ತಂಡಗಳು, 217 ಸ್ಥಿರ ತಂಡಗಳನ್ನು ರಚಿಸಲಾಗಿದೆ. ಮಕ್ಕಳಿಗೆ ಆ.12 ರವರೆಗೆ ಲಸಿಕೆಯನ್ನು ಹಾಕಲಾಗುವುದು. ಗ್ರಾಮೀಣ ಭಾಗದಲ್ಲಿನ ವಲಸೆ ಕೂಲಿ ಮಾಡುವವರ ಕುಟುಂಬದಲ್ಲಿನ ಮಕ್ಕಳಿಗೆ ಹಾಗೂ ಕೊಳಗೇರಿಯ ಮಕ್ಕಳಿಗೆ ವಿಶೇಷವಾಗಿ ಜಾಗೃತಿ ಮೂಡಿಸಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.