ಜಿಲ್ಲೆ

ಶಾಲಾಭಿವೃದ್ಧಿಗೆ ಶಿಕ್ಷಕರ ಪ್ರಯತ್ನ ಶ್ಲಾಘನೀಯ

ಇಂದಿರಾ ಎನ್ ಕೆ

ಗಂಗೊಳ್ಳಿ: ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಭಿವೃದ್ಧಿ ಸಮಿತಿ, ಸಾರ್ವಜನಿಕರು, ಶಿಕ್ಷಕರು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ವಾರ್ಷಿಕ ಸಂಭ್ರಮ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಜನಾರ್ದನ ಧ್ವಜಾರೋಹಣಗೈದರು. ಗುತ್ತಿಗೆದಾರ ಉಪ್ಪಿನಕುದ್ರು ರಾಜೇಶ ಕಾರಂತ, ಮರವಂತೆ ಗ್ರಾಪಂ ಅಧ್ಯಕ್ಷ ಲೋಕೇಶ ಖಾರ್ವಿ, ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ನಾಗರಾಜ ಪಟಗಾರ್, ಅಭಿವೃದ್ಧಿ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿ ಮಡಿವಾಳ್, ಅನಿತಾ ಆರ್.ಕೆ., ಹಿಂದಿನ ಮುಖ್ಯ ಶಿಕ್ಷಕ ಜಿ.ಬಿ.ಭಾಸ್ಕರ, ನಿವೃತ್ತ ಶಿಕ್ಷಕ ಶಂಕರ ಬಿಲ್ಲವ, ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರೇಮಿ ಕ್ರಾಸ್ತಾ, ಸೀತಾ ಜೋಗಿ, ಗ್ರಾಪಂ ಸದಸ್ಯ ಕರುಣಾಕರ ಆಚಾರ್, ವಿದ್ಯಾರ್ಥಿ ನಾಯಕ ಸಂದರ್ಶ, ನಾಯಕಿ ವೈಷ್ಣವಿ, ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಶಾಲೆ ವಾರ್ಷಿಕ ಸಂಚಿಕೆ ಪ್ರೇರಣಾ ಬಿಡುಗಡೆಗೊಳಿಸಲಾಯಿತು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್, ಶಾಲೆಗೆ ನೆರವು ನೀಡಿದ ಜತೀಂದ್ರ ಮರವಂತೆ, ಅಂಬಿಕಾ ಶೆಟ್ಟಿ, ಶಶಿಧರ ಶೆಟ್ಟಿ, ವೆಂಕಟರಮಣ ಖಾರ್ವಿ, ವಿಶ್ವನಾಥ ಶ್ಯಾನುಭಾಗ್, ಸತೀಶ ಪೂಜಾರಿ, ರಾಘವೇಂದ್ರ ಆಚಾರ್ಯ, ನಿವೃತ್ತ ಶಿಕ್ಷಕರಾದ ಸರ್ವೋತ್ತಮ ಭಟ್, ರಿಚರ್ಡ್ ಸಾಲಿನ್ಸ್ ಅವರನ್ನು ಗೌರವಿಸಲಾಯಿತು.

ಶಿಕ್ಷಕ ಹಿತೇಶ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಂ.ಭಾಸ್ಕರ ಮಯ್ಯ ವರದಿ ವಾಚಿಸಿದರು. ಶ್ರೀಧರ ಭಟ್ ವಂದಿಸಿದರು. ಚಂದ್ರ ಡಿ. ಕಾರ್ಯಕ್ರಮ ನಿರೂಪಿಸಿದರು.