ಮೂಡುಬಿದಿರೆ: ಕಡಲಕೆರೆ ಬಳಿಯ ಪ್ರೇರಣಾ ಶಾಲೆಯಲ್ಲಿ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು.
ಮೂಡುಬಿದಿರೆ ವೈಬ್ರೆಂಟ್ ಎಜುಕೇಶನ್ ಹಾಗೂ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಚಂದ್ರಶೇಖರ್ ರಾಜೇ ಅರಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ದೇಶದ ಸಂಸ್ಕಾರಯುತ ಜೀವನ ಪದ್ಧತಿಯನ್ನು ವಿದೇಶಿಗರು ನಿಬ್ಬೆರಗಾಗಿ ನೋಡುತ್ತಿದ್ದಾರೆ. ಸಮಾಜ ಸಂಸ್ಕಾರಯುತವಾಗಿ ಮುನ್ನಡೆಯಲು ಪ್ರಬುದ್ಧ ಶಿಕ್ಷಕರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳ ಸಾಧನೆ ಶಿಕ್ಷಕರಿಗೆ ಗುರು ಕಾಣಿಕೆ ಎಂದರು.
ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಸಂಚಾಲಕ ಎಂ.ಶಾಂತಾರಾಮ ಕುಡ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಿಯಾದ ಗುರಿ ಹಾಗೂ ಸಮರ್ಥ ಗುರು ಇದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಕೋಶಾಧಿಕಾರಿ ಎಸ್.ಎನ್.ಬೋರ್ಕರ್, ಕಾರ್ಯದರ್ಶಿ ಡಾ.ಕೇಶವ ಹೆಗ್ಡೆ, ಟ್ರಸ್ಟಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು. ಸೇವಾಂಜಲಿಯ ಅಧ್ಯಕ್ಷ ರಾಜೇಶ್ ಬಂಗೇರ ಸ್ವಾಗತಿಸಿದರು. ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್ ವಂದಿಸಿದರು. ಟ್ರಸ್ಟಿ ಆನಂದ ಕಾರ್ಲ ಕಾರ್ಯಕ್ರಮ ನಿರೂಪಿಸಿದರು.