ಕಿನ್ನಿಗೋಳಿ: ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಇದ್ದಾಗ ಸರಿಯಾದ ಗುರಿ ತಲುಪಲು ಸಾಧ್ಯ. ಮಕ್ಕಳಿಗೆ ಶಾಲೆ, ಟ್ಯೂಶನ್ ಹೀಗೆ ಶಿಕ್ಷಣದ ಬಗ್ಗೆ ಒತ್ತಡಗಳು ಹೆಚ್ಚಾಗುತ್ತಿವೆ. ದೈಹಿಕ ಮತ್ತು ಭೌತಿಕ ಬೆಳವಣಿಗೆಗೆ ಕ್ರೀಡೆ ಅತ್ಯಗತ್ಯ, ದಿನಕ್ಕೆ ಒಂದು ಗಂಟೆಯಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು, ಆಧುನಿಕ ಕಾಲದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಇಬ್ಬರೂ ಬದಲಾಗಬೇಕು ಆಗ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಡಾ.ವೀಣಾ ಬನ್ನಂಜೆ ಹೇಳಿದರು.
ಕಟೀಲು ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ವೀಣಾ ಬನ್ನಂಜೆ ಅವರನ್ನು ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ವಿಜಯ್ ವಿ., ಕುಸುಮಾವತಿ, ರಾಜಶೇಖರ್, ಗಿರೀಶ್ ತಂತ್ರಿ, ಸರೋಜಿನಿ, ಚಂದ್ರಶೇಖರ್ ಭಟ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲಿಯಾನ್, ಶಿಕ್ಷಕ ರಕ್ಷಕ ಸಂಘಗಳ ಅಧ್ಯಕ್ಷೆ ಶುಭಲತಾ ಶೆಟ್ಟಿ, ಗ್ರೆಗರಿ ಸಿಕ್ವೇರ, ಅನಿತಾ, ಪ್ರಕಾಶ್ ಆಚಾರ್ಯ, ರಮೇಶ್ ಕೆ.ಜಿ., ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು. ಸೃಷಿ ಶೆಟ್ಟಿ ಸ್ವಾಗತಿಸಿದು. ವೈಷ್ಣವಿ ಭಟ್ ಪರಿಚಯಿಸಿದರು. ಶಿವಮಣ್ಯು ಕಾರ್ಯಕ್ರಮ ನಿರೂಪಿಸಿದರು.