ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ಇಂದಿರಾ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ನಿವೃತ್ತರಾದ ಶಿಕ್ಷಕ ಸುಧಾಕರ ಶೆಟ್ಟಿ ಅವರಿಗೆ ಶಾಲಾ ವತಿಯಿಂದ ಅಭಿನಂದನಾ ಕಾರ್ಯಕ್ರಮ ಸೋಮವಾರ ನಡೆಯಿತು.
ಹೆಬ್ರಿ ತಹಸೀಲ್ದಾರ್ ಹಾಗೂ ಹೆಬ್ರಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎ.ಪ್ರಸಾದ್ ಮಾತನಾಡಿ ಶಿಕ್ಷಕರ ನಿವೃತ್ತಿಯು ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಶಿಕ್ಷಕರು ಸಮಾಜದಲ್ಲಿ ಬಹಳ ಪ್ರತಿಷ್ಠಿತ ವ್ಯಕ್ತಿಗಳು. ಅವರು ನಮ್ಮ ದೇಶದ ಅದ್ಭುತ ಭವಿಷ್ಯದ ಸೃಷ್ಟಿಕರ್ತರು ಎಂದರು.
ಮೂವತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸುಧಾಕರ ಶೆಟ್ಟಿ ದಂಪತಿಯನ್ನು ಶಾಲಾ ಎಸ್.ಡಿ.ಎಂ.ಸಿ, ಮೇಲುಸ್ತುವಾರಿ ಸಮಿತಿ, ಶಿಕ್ಷಕರು, ವಿದ್ಯಾರ್ಥಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ವಲಯ, ಬೆಳ್ತಂಗಡಿ ತಾಲೂಕಿನ ಶಾಲಾ ಶಿಕ್ಷಕ ವೃಂದದಿಂದ, ಹೆಬ್ರಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದಿಂದ, ಹೆಬ್ರಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಆಚಾರ್ ವಹಿಸಿದ್ದರು. ಕಾರ್ಯಕ್ರಮವನ್ನು ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ ಉದ್ಘಾಟಿಸಿದರು.
ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಕೋ ಆರ್ಡಿನೇಟರ್ ಸಂತೋಷಕುಮಾರ್ ಶೆಟ್ಟಿ, ಪ್ರಮುಖರಾದ ರಾಘವೇಂದ್ರ ನಾಯ್ಕ, ಶಿವಶಂಕರ್ ಭಟ್, ಶ್ರೀನಿವಾಸ ಭಂಡಾರಿ, ರಮಾನಂದ ಶೆಟ್ಟಿ, ಮಂಜುನಾಥ ಶೆಟ್ಟಿ, ಪ್ರಿತೇಶ್ ಕುಮಾರ್ ಶೆಟ್ಟಿ, ಸಿ.ಸಂತೋಷ್, ಸದಾಶಿವ ಸೇರ್ವೆಗಾರ್, ಗಣೇಶ್ ಕುಲಾಲ್, ಚಿದಾನಂದ ಸ್ವಾಮಿ, ಉಮೇಶ್, ಮಾಲತಿ, ಸುನೀಲ್ ಭಂಡಾರಿ, ಆಶಾ ಉಪಸ್ಥಿತರಿದರು. ಮುಖ್ಯಶಿಕ್ಷಕ ರಾಮಾಂಜನೇಯ ಸ್ವಾಗತಿಸಿದರು. ಸತೀಶ್ಚಂದ್ರ ಬಾಬು ನಿರೂಪಿಸಿದರು. ಅನಿತಾ ವಂದಿಸಿದರು. ಗೌತಮಿ ಸಹಕರಿಸಿದರು.