ಶಾಂತಿನಿಕೇತನ ಯುವವೃಂದ ಹಾಗೂ ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ವತಿಯಿಂದ ಅಗಲಿದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  
ಜಿಲ್ಲೆ

ಬಡವರಿಗೆ ಅವಕಾಶ ನೀಡಿದ್ದ ಟಾಟಾ

ಹೆಬ್ರಿ: ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಏಳಿಗೆಗೆ ಆದ್ಯತೆ ನೀಡಿದ ಮಹಾನ್ ಸಾಧಕ ರತನ್ ಟಾಟಾ. ಬಡವರ ಮೇಲೆ ಹೆಚ್ಚು ಕಾಳಜಿ ಹೊಂದಿದ್ದ ಅವರು ಬಡವರಿಗೇ ಹೆಚ್ಚು ಅವಕಾಶ ನೀಡುತ್ತಿದ್ದರು. ಅವರ ಅಗಲಿಕೆ ಉದ್ಯಮ ಕ್ಷೇತ್ರ ಸಹಿತ ಇಡೀ ಭಾರತಕ್ಕೆ ತುಂಬಲಾರದ ನಷ್ಟ ಎಂದು ಶಾಂತಿನಿಕೇತನ ಸೌಹಾರ್ದ ಸಹಕಾರಿ ಅಧ್ಯಕ್ಷ ರಾಜೇಶ್ ತಿಳಿಸಿದರು.

ಕುಡಿಬೈಲ್ ಕುಚ್ಚೂರು ಶಾಂತಿನಿಕೇತನ ಯುವವೃಂದ ಹಾಗೂ ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ದಿ.ರತನ್ ಟಾಟಾ ಅವರಿಗೆ ಇತ್ತೀಚೆಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಸಂಸ್ಥೆ ವತಿಯಿಂದ ರತನ್ ಟಾಟಾ ಭಾವಚಿತ್ರಕ್ಕೆ ಪುಷ್ಪ್ಪಾರ್ಪಣೆ ಸಹಿತ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕೆ ಗಣೇಶ್ ನರೇಂದ್ರ, ರಾಜೇಶ್ರೀ, ನಾಗರಾಜ್, ರಾಘವೇಂದ್ರ, ಸದಸ್ಯರು ಉಪಸ್ಥಿತರಿದ್ದರು.