ಜಿಲ್ಲೆ

ಹೊಲಗಳಿಗೆ ನುಗ್ಗಿ ಹಾವಳಿ ಎಬ್ಬಿಸಿದ ಒಂಟಿ ಸಲಗ!

ಆನೇಕಲ್​: ಕರ್ನಾಟಕ​ ಹಾಗೂ ತಮಿಳುನಾಡು ಗಡಿಭಾಗದಲ್ಲಿ ಒಂಟಿ ಸಲಗ ಉಪಟಳ ಹೆಚ್ಚಾಗಿದೆ. ಮೊನ್ನೆ ಗೂಳಿಯ ಗುಟುರಿಗೆ ಬೆದರಿ ಒಂಟಿ ಸಲಗ ಕಾಲ್ಕಿತ್ತಿತ್ತು. ಆದರೆ, ಇಂದು ಗಡಿಭಾಗ ಡೆಂಕಣಿಕೋಟೆಯಲ್ಲಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದೆ.

ಡೆಂಕಣಿಕೋಟೆ ಗ್ರಾಮದ ಹೊಲದಲ್ಲಿ ಒಂಟಿ ಸಲಗ ಆನೆಯ ಪುಂಡಾಟ ಹೆಚ್ಚಾಗಿದೆ. ಹೊಲದಲ್ಲಿನ ಮನೆಯ ಬಳಿಯೇ ಒಂಟಿ ಸಲಗ ಆಗಮಿಸಿದೆ. ಹೊಲಗಳಿಗೆ ನುಗ್ಗಿ ಹಾವಳಿ ಎಬ್ಬಿಸಿದ್ದು, ದಾಳಿ ಮಾಡುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.

ಮೊನ್ನೇಯಷ್ಟೇ ಹೋರಿಯ ಮೇಲೆ ಕಾದಾಟಕ್ಕೆ ಒಂಟಿ ಸಲಗ ಮುಂದಾಗಿತ್ತು. ಹೋರಿಯ ಗುಟುರು ಶಬ್ದಕ್ಕೆ ಬೆದರಿ ಆನೆ ಕಾಲ್ಕಿತ್ತಿತ್ತು. ಇದೀಗ ಮತ್ತೆ ಗ್ರಾಮದ ಕಡೆ ಸಲಗ ಎಂಟ್ರಿ ಕೊಟ್ಟಿದ್ದು, ಜನರು ಭಯದಲ್ಲಿದ್ದಾರೆ.