ಕೂಡ್ಲಿಗಿಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕ, ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನವಾಗಿರುವುದು. ತರಬೇತುದಾರ ಶಿವಾನಂದ ಬಿ.ಬಿ., ದೈಹಿಕ ಶಿಕ್ಷಣ ಶಿಕ್ಷಕ ಕೆಂಗನಗೌಡ ಬಿ. ಎಂ.ಎಸ್ಡಿಎಂಸಿ ಅಧ್ಯಕ್ಷ ನಲ್ಲಮುತ್ತಿ ದುರ್ಗಾದಾಸ್, ಮುಖ್ಯ ಶಿಕ್ಷಕಿ ರುದ್ರಮ್ಮ, ಸಹ ಶಿಕ್ಷಕಯರಾದ ಶೋಭಾ, ರತ್ನಮ್ಮ, ರಾಜಮ್ಮ, ವಿಜಯ, ಬಸವರಾಜ ಇದ್ದರು. 
ಜಿಲ್ಲೆ

ವಿಜಯಲಕ್ಷ್ಮೀಗೆ ವೀರಾಗ್ರಣಿ ಪ್ರಶಸ್ತಿ

ಪ್ರವೀಣ ಉದುಸಾ ದಲಬಂಜನ್

ಕೂಡ್ಲಿಗಿ: ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕ, ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು 12 ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿಗೆ ಭಾಜನ

ಶಾಲೆಯ ವಿಜಯಲಕ್ಷ್ಮೀ 100 ಮೀಟರ್ ಓಟ, 400 ಮೀ. ಓಟ, 600 ಮೀ. ಓಟ, 80 ಮೀ. ಅಡೆತಡೆ ಓಟ, 4100 ಮೀ. ರಿಲೇ ಓಟ, ಉದ್ದ ಜಿಗಿತ ಗಳಲ್ಲಿ ಚಿನ್ನದ ಪದಕ ಹಾಗೂ 200 ಮೀ. ಓಟ, ಗುಂಡು ಎಸೆತಗಳಲ್ಲಿ ಬೆಳ್ಳಿಯ ಪದಕ ಪಡೆಯುವ ಮೂಲಕ ಒಟ್ಟು 10 ಸ್ಪರ್ಧೆಗಳ ಪೈಕಿ 08 ರಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ವೀರಾಗ್ರಣಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಇದೇ ಶಾಲೆಯ ನಾಲ್ವರು ವಿದ್ಯಾರ್ಥಿಗಳು 100 ಮೀಟರ್ ಓಟ, 400 ಮೀ. ಓಟ, 600 ಮೀ.ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿ ಕುಮಾರ ಚೇತನ್ ಎನ್. ಸಿ. 400 ಮೀ. ಓಟ, 600 ಮೀ ಓಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಹಾಗೂ 80 ಮೀ. ಅಡೆತಡೆ ಓಟದಲ್ಲಿ ಬೆಳ್ಳಿಯ ಪದಕ ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಕಳೆದ ವರ್ಷವು ಶಾಲೆಯ ಆರು ಕ್ರೀಡಾಪಟುಗಳು ನಾಲ್ಕು ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ವಿಶೇಷವಾಗಿದೆ.

ತರಬೇತುದಾರರಾದ ಶಿವಾನಂದ ಬಿ.ಬಿ.,ದೈಹಿಕ ಶಿಕ್ಷಣ ಶಿಕ್ಷಕ ಕೆಂಗನಗೌಡ ಬಿ. ಎಂ. ಇವರನ್ನು ಜಿಲ್ಲಾ ದೈಹಿಕ ಪರಿವೀಕ್ಷ ಬಿ.ಮಂಜುನಾಥ, ಬಿಇಒ ಪದ್ಮನಾಭ ಕರ್ಣಂ, ಎಸ್ಡಿಎಂಸಿ ಅಧ್ಯಕ್ಷ ನಲ್ಲಮುತ್ತಿ ದುರ್ಗಾದಾಸ್ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಪ್ರಾಥಮಿಕ ಶಾಲೆಗಳ ಬಾಲಕ, ಬಾಲಕಿಯರ ವಿಭಾಗದ 20 ಸ್ಪರ್ಧೆಗಳು, ಪ್ರೌಢಶಾಲೆಗಳ ಬಾಲಕ-ಬಾಲಕಿಯರ 34 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.