ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದೇಶ ಮತ್ತು ಧರ್ಮ ಜತೆಯಾಗಿ ಹೋಗಬೇಕು. ಧರ್ಮ ಬಿಟ್ಟು ಕೊಟ್ಟರೆ ದೇಶ ಸತ್ತಂತೆ. ಇತರ ದೇಶಗಳಲ್ಲಿ ಪುರುಷ ದೇವರಾದರೆ, ನಮ್ಮ ದೇಶದಲ್ಲಿ ಸ್ತ್ರೀಯರೂ ದೇವರು. ಪ್ರಸ್ತುತ ದಿನಗಳಲ್ಲಿ ತಾಯಂದಿರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ದುಃಖಕರ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಚಾಲಕ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಖೇದ ವ್ಯಕ್ತಪಡಿಸಿದರು.
ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶತ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಡಿ.30ರವರೆಗೆ ನಡೆಯಲಿರುವ ಬ್ರಹ್ಮಕಲಶ ಸಹಿತ ಶತಚಂಡಿಕಾ ಯಾಗದ ಮೂರನೇ ದಿನದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಮುಂಬೈ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕೂಳೂರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕೈರಂಗಳ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಮಧುಸೂಧನ್ ಆಯರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ವಕೀಲ ರಾಮ್ ಪ್ರಸಾದ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ವರ್ಕಾಡಿ ಚಾವಡಿಬೈಲುಗುತ್ತು ಪ್ರವೀಣ್ ಕುಮಾರ್ ಭಂಡಾರಿ, ಕೊಂಡೆವೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಧ್ಯಕ್ಷ ಐತಪ್ಪ ಶೆಟ್ಟಿ ದೇವಂದಪಡ್ಪು, ವಿಕೆ ಫರ್ನೀಚರ್ ಮಾಲೀಕ ವಿಠಲ ಕುಲಾಲ್, ತಲಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಮೋಹನ್‌ದಾಸ್ ರೈ ಸಾಂತ್ಯಗುತ್ತು, ಶತಚಂಡಿಕಾಯಾಗ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಕಿಲ್ಲೆ, ನಾರಾಯಣ ದೇವಿಪುರ, ಗೋಪಾಲಕೃಷ್ಣ ಮೇಲಾಂಟ, ವಸಂತ ದೇವಾಡಿಗ, ರಾಜೇಶ್ ಗುಡ್ಡೆಮನೆ, ಕಾರ್ಯದರ್ಶಿಗಳಾದ ಪ್ರೇಮಾನಂದ ರೈ, ನಿತ್ಯಾನಂದ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಸದಾಶಿವ ಆಳ್ವ ಅಭಿನಂದನಾ ಮಾತುಗಳನ್ನಾಡಿದರು. ರಮೇಶ್ ಆಳ್ವ ದೇವಿಪುರ ವಂದಿಸಿದರು. ಪ್ರವೀಣ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.
ಯಾವ ಮನೆಯಲ್ಲಿ ತಾಯಿಗೆ ಗೌರವ ಇದೆಯೋ, ಮಹಿಳೆಗೆ ಮಹತ್ವದ ಸ್ಥಾನ ಎಲ್ಲಿರುವುದೋ ಅಲ್ಲಿ ದೇವತೆಗಳು ಸಂತೋಷ ಪಡುತ್ತಾರೆ. ಎಲ್ಲ ರೀತಿಯ ಸೇವೆ ಕ್ಷೇತ್ರದಲ್ಲಿ ನಡೆಸುವ ಮೂಲಕ ತಾಯಿ ದುರ್ಗಾಪರಮೇಶ್ವರಿಗೆ ಸಂತೋಷ ನೀಡಲಾಗಿದೆ.
ಟಿ.ಜಿ.ರಾಜಾರಾಮ ಭಟ್, ಸಂಚಾಲಕರು,
ಶಾರದಾಗಣಪತಿ ವಿದ್ಯಾಕೇಂದ್ರ, ಕೈರಂಗಳ
ಸರಸ್ವತಿಯ ಕೃಪೆ ಪಡೆದರೆ ಜೀವನದಲ್ಲಿ ಯಾವ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಧಾರ್ಮಿಕ ಜ್ಞಾನ ಮೂಡಿಸುವ ಜತೆಗೆ ಊರಿನಲ್ಲಿರುವ ಕ್ಷೇತ್ರಗಳ ಬಗ್ಗೆ ಭಕ್ತಿ ಮೂಡಿಸುವ ಕಾರ್ಯ ನಡೆಯಬೇಕು. ಕನ್ಯಾನ ಸದಾಶಿವ ಶೆಟ್ಟಿ ಕೂಳೂರು ಮುಂಬೈ ಉದ್ಯಮಿ