ಉಳ್ಳಾಲ: ರಸಾಯನಶಾಸ್ತ್ರ ಪ್ರಾಥಮಿಕ ಜ್ಞಾನದ ತಳಹದಿಯ ಮೇಲೆ ಸಂಶ್ಲೇಷಣೆಗೆ ಆಧುನಿಕ ತಂತ್ರಜ್ಞಾನದ ವಿಧಾನ ಬಳಸಿ ತಯಾರಿಸಿದ ರಾಸಾಯನಿಕಗಳು ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಸಿಂಜೆಂಟಾ ಬಯೋಸೈನ್ಸಸ್ ಸಂಶೋಧನೆ ಮತ್ತು ತಂತ್ರಜ್ಞಾನ ಕೇಂದ್ರದ ನಿರ್ದೇಶಕ ಡಾ.ಬಾನು ಮಂಜುನಾಥ್ ಹೇಳಿದರು.
ಮಂಗಳೂರು ವಿವಿ ಕೈಗಾರಿಕಾ ವಿಭಾಗ ಆಯೋಜಿಸಿದ ಸಿಂಜೆಂಟಾ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.
ಸಿಂಜೆಂಟಾ ಬಯೋಸೈನ್ಸಸ್ ಪ್ರೊಸೆಸ್ ರಿಸರ್ಚ್ ಆ್ಯಂಡ್ ಅನಾಲಿಟಿಕಲ್ ಕೆಮಿಸ್ಟ್ರಿ ವಿಭಾಗ ಗ್ರೂಪ್ ಲೀಡರ್ ಡಾ.ಪ್ರಶಾಂತ ಕಾಮತ್ ಎಕ್ಸ್‌ಪ್ಲೋರಿಂಗ್ ಎನೇಬಲಿಂಗ್ ಟೆಕ್ನಾಲಜೀಸ್ ಇನ್ ಆರ್ಗಾನಿಕ್ ಸಿಂಥೆಸಿಸ್ ಎಂಬ ವಿಷಯದಲ್ಲಿ ಮಾತನಾಡಿ, ಮೆಕಾನೋ ಕೆಮಿಸ್ಟ್ರಿ, ಫೋಟೋ ಕೆಮಿಸ್ಟ್ರಿ, ಇಲೆಕ್ಟ್ರೋ ಕೆಮಿಸ್ಟ್ರಿ ಮತ್ತು ಫ್ಲೋ ಕೆಮಿಸ್ಟ್ರಿಯಂತಹ ಪರಿಸರ ಸ್ನೇಹಿ ತಂತ್ರಜ್ಞಾನ ಉಪಯೋಗಿಸಿ ಜಗತ್ತಿನ ಅತಿದೊಡ್ಡ ಕೃಷಿ ರಾಸಾಯನಿಕಗಳನ್ನು ತಯಾರಿಸುವ ಕಂಪನಿಯಾಗಿ ಬದಲಾಗಿದೆ ಎಂದರು.
ಜೀವರಸಾಯನಶಾಸ್ತ್ರ ವಿಭಾಗದ ಸಂಯೋಜಕ ಪ್ರೊ.ಚಂದ್ರಶೇಖರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥೆ ಪ್ರೊ.ಸರೋಜಿನಿ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ರಮೇಶ್ ಗಣಿ ವಂದಿಸಿದರು. ಉಪನ್ಯಾಸಕಿ ನಿಶಿತಾ ಕಾರ್ಯಕ್ರಮ ನಿರೂಪಿಸಿದರು.
ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಶೈಕ್ಷಣಿಕ ಸಂಶೋಧನೆಗಳಿಗೆ ಹೋಲಿಸಿದರೆ ಕಂಪನಿಗಳಲ್ಲಿ ನಡೆಯುವ ಸಂಶೋಧನೆ ಭಿನ್ನವಾಗಿರುತ್ತದೆ, ಅದು ನೈಜ ಬದುಕಿಗೆ ಸಂಬಂಧಪಟ್ಟ ಸವಾಲುಗಳಿಗೆ ನೇರ ಉತ್ತರ ಕಂಡುಕೊಳ್ಳುವಲ್ಲಿ ಶ್ರಮಿಸುತ್ತದೆ. ಪ್ರೊ.ಚಂದ್ರಶೇಖರ ಜೋಶಿ ಜೀವರಸಾಯನಶಾಸ್ತ್ರ ವಿಭಾಗದ ಸಂಯೋಜಕ