ಜಿಲ್ಲೆ

ಸ್ವಚ್ಛತೆ ಜೀವನದ ಮುಖ್ಯ ಗುರಿ : ಉಮಾನಾಥ ಕೋಟ್ಯಾನ್ ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಸ್ವಚ್ಛತೆ ನಮ್ಮ ಜೀವನದ ಮುಖ್ಯ ಗುರಿಯಾಗಿದ್ದು, ಸ್ವಚ್ಛತಾ ಅಭಿಯಾನ ನಿರಂತರವಾಗಿ ನಡೆಯಲಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ನಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ವಿವಿಧೆಡೆ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ನಪಂ ಮುಖ್ಯಾಧಿಕಾರಿ ಮಧುಕರ್, ಸದಸ್ಯರಾದ ಹರ್ಷರಾಜ ಶೆಟ್ಟಿ, ಶೈಲೇಶ್ ಕುಮಾರ್, ದಯಾವತಿ ಅಂಚನ್, ಸುಭಾಷ್ ಶೆಟ್ಟಿ, ಬಿಜೆಪಿ ನಾಯಕರಾದ ನವೀನ್ ರಾಜ್, ಈರಣ್ಣ ಅರಳಗುಂಡಿ, ವಿಠಲ್ ಎನ್.ಎಂ., ಸತ್ಯೇಂದ್ರ ಶೆಣೈ, ಅಶೋಕ್ ಜನನಿ ಮತ್ತಿತರರು ಉಪಸ್ಥಿತರಿದ್ದರು.