ಬಂಟ್ವಾಳ: ಯುವಜನತೆಯ ಶಕ್ತಿಯು ದೇಶದ ಭವಿಷ್ಯವನ್ನೇ ರೂಪಿಸುವ ಸಾಮರ್ಥ್ಯ ಹೊಂದಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹೇಳಿದರು.
ಯುವವಾಹಿನಿ ಬಂಟ್ವಾಳ ಘಟಕ ಆಶ್ರಯದಲ್ಲಿ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಮನೆಯಲ್ಲಿ ನಡೆದ ಗುರುತತ್ವವಾಹಿನಿ 50ರ ಮಾಲಿಕೆ ಸುವರ್ಣ ಸಂಭ್ರಮದಲ್ಲಿ ಮಾತನಾಡಿದರು.
ತರಬೇತುದಾರ ಉದಯ್ ಕುಮಾರ್ ಜ್ಯೋತಿಗುಡ್ಡೆ ಶುಭಹಾರೈಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅಧ್ಯಕ್ಷತೆ ವಹಿಸಿದ್ದರು. ಗುರುತತ್ವವಾಹಿನಿ 50 ಮಾಲಿಕೆಗಳಿಗೆ ಸಹಕರಿಸಿದ ದಿನೇಶ್ ಸುವರ್ಣ ರಾಯಿ, ಪ್ರೇಮನಾಥ್ ಕೆ., ಮಹೇಶ್ ಬೊಳ್ಳಾಯಿ, ರಾಜೇಶ್ ಅಮ್ಟೂರು, ಪುರುಷೋತ್ತಮ ಕಾಯರ್‌ಪಲ್ಕೆ, ರಾಜೇಶ್ ಸುವರ್ಣ, ಚಿನ್ನಾ ಕಲ್ಲಡ್ಕ, ನಾಗೇಶ್ ಪೊನ್ನೊಡಿ, ಸಾತ್ವಿಕ್ ದೇರಾಜೆ, ಗಣರಾಜ್ ಭಟ್ ಕೆದಿಲ ಅವರನ್ನು ಅಭಿನಂದಿಸಲಾಯಿತು.
ಪ್ರಶಾಂತ್ ಅಮೀನ್ ಏರಮಲೆ ಸ್ವಾಗತಿಸಿದರು. ಮಲ್ಲಿಕಾ ವೇಣುಗೋಪಾಲ್ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ಮುಂಡಾಜೆ ವಂದಿಸಿದರು.