

ಬಂಟ್ವಾಳ: ದಕ್ಷಿಣ ಕನ್ನಡ ಜಿಪಂ ಹಾಗು ಕೃಷಿ ಇಲಾಖೆಯ 2025-26ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವೀರಕಂಭ ಗ್ರಾಮದ ತೆಕ್ಕಿಪಾಪು ನಳಿನಿ ಮೋನಪ್ಪ ಪೂಜಾರಿ ಮನೆ ವಠಾರದಲ್ಲಿ ಬುಧವಾರ ಜರುಗಿತು.
ವೀರಕಂಭ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರಾದ ಜಯಪ್ರಕಾಶ್ ತೆಕ್ಕಿಪಾಪು ಉದ್ಘಾಟಿಸಿದರು. ಬಂಟ್ವಾಳ ತಾಲೂಕು ತೋಟಗಾರಿಕಾ ನಿರ್ದೇಶಕ ದಿನೇಶ್, ತಾಲೂಕು, ಕೃಷಿ ಅಧಿಕಾರಿ ನಂದನ್ ಶೆಣೈ, ಆತ್ಮಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಹನುಮಂತ ಕಾಳಗಿ ಮಾಹಿತಿ ನೀಡಿದರು.
ಕೃಷಿ ಸಖಿಯರಾದ ನಮಿತಾ, ಗಾಯತ್ರಿ ಅಳಿಕೆ, ಸವಿತಾ ಡಿಸೋಜ, ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕ ವಿರೂಪಾಕ್ಷ ಸಹಕರಿಸಿದರು. ಗ್ರಾಪಂ ಸದಸ್ಯರಾದ ಅಬ್ದುಲ್ ರೆಹಮಾನ್, ಕೃಷಿಕ ಮಜಿ ತಿರುಮಲೇಶ್ವರ ಕುಮಾರ್, ನಿವೃತ್ತ ಸೈನಿಕ ಚಂದ್ರಶೇಖರ್ ಉಪಸ್ಥಿತರಿದ್ದರು.
ವೀರಕಂಬ ಗ್ರಾಮ ಪಶುಸಖಿ ಪ್ರಚೀನಾ ಸ್ವಾಗತಿಸಿದರು. ಕೃಷಿ ಸಿ.ಆರ್.ಪಿ. ಪುಷ್ಪಾವತಿ ನಿರೂಪಿಸಿದರು. ಸ್ನೇಹ ಸಂಜೀವಿನಿ ಒಕ್ಕೂಟ ಮುಖ್ಯ ಬರಹಗಾರ ಮಲ್ಲಿಕಾ ಶೆಟ್ಟಿ ವಂದಿಸಿದರು.