ಜಿಲ್ಲೆ

ಮರಳು ಅಕ್ರಮ ಸಾಗಾಟ ಆರೋಪಿ ಸೆರೆ

ಸೌಮ್ಯ ಆರ್

ಬೆಳ್ತಂಗಡಿ: ಮರಳು ಅಕ್ರಮ ಸಾಗಾಟ ಪ್ರಕರಣವೊಂದನ್ನು ವೇಣೂರು ಪೊಲೀಸರು ಪತ್ತೆ ಹಚ್ಚಿ ಆರೋಪಿ ಧನಕೀರ್ತಿ ಎಂಬಾತನನ್ನು ಬಂಧಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಸೆ.2ರಂದು ಗೂಡ್ಸ್ ಮಿನಿ ಟಿಪ್ಪರ್‌ನಲ್ಲಿ ಕೊಕ್ರಾಡಿ ಬಳಿ ಮರಳು ಸಾಗಾಟ ಮಾಡುತ್ತಿರುವುದನ್ನು ಗಮನಿಸಿದ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಮರಳು ಸಾಗಾಟ ಬಗ್ಗೆ ಆತನಲ್ಲಿ ಯಾವುದೇ ಪರವಾನಗಿ ಇರಲಿಲ್ಲ. ಸುಲ್ಕೇರಿ ಎಂಬಲ್ಲಿ ಹರಿಯುವ ನದಿಯಿಂದ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.