ಸಿಂಧನೂರಿನ ತಹಸಿಲ್ ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ತಹಸೀಲ್ದಾರ್ ಅರುಣ್ ದೇಸಾಯಿ, ಪ್ರಮುಖರಾದ ಎಂ.ದೊಡ್ಡಬಸವರಾಜ, ಎನ್.ಶಿವನಗೌಡ ಗೊರೇಬಾಳ ಇತರರಿದ್ದರು. 
ಜಿಲ್ಲೆ

ಶರಣರ ತತ್ವಗಳು ಪ್ರೇರಣೆಯಾಗಲಿ

ಸಿಂಧನೂರು: ಸಂತ ಸೇವಾಲಾಲರ ಜೀವನ ಸಾರ್ಥಕತೆಯಿಂದ ಕೂಡಿದ್ದು, ಅವರ ಆದರ್ಶಗಳು ಇಂದಿನ ಪೀಳಿಗೆಗೆ ಅಗತ್ಯ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ಜೀವನಾದರ್ಶಗಳು ಪ್ರತಿಯೊಬ್ಬರ ಬದುಕು ಅರಳಿಸುತ್ತವೆ. ಕೇವಲ ಜಯಂತಿ ಆಚರಣೆಗೆ ನಾವೆಲ್ಲ ಸೀಮಿತಗೊಳ್ಳದೆ, ಅವರ ಆದರ್ಶಗಳನ್ನು ಜಾರಿಗೆ ತರುವ ಕೆಲಸವಾಗಬೇಕು. ಯಾವ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ಆದರ್ಶ ಮೌಲ್ಯಗಳು ಪ್ರತಿ ಸಮಾಜಕ್ಕೂ ಅಗತ್ಯ ಎಂದರು.

ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಪ್ರಮುಖರಾದ ಎಂ.ದೊಡ್ಡಬಸವರಾಜ, ಎನ್.ಶಿವನಗೌಡ ಗೊರೇಬಾಳ, ಮಲ್ಲಿಕಾರ್ಜುನ ಜೀನೂರು, ಕೃಷ್ಣಪ್ಪ ರಾಥೋಡ್, ಖಾಜಿ ಮಲ್ಲಿಕ್ ವಕೀಲ, ಕೆ.ಮರಿಯಪ್ಪ ಇತರರಿದ್ದರು.