ಅಳವಂಡಿ ಗ್ರಾಪಂನಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು. ಪಿಡಿಒ ಕೊಟ್ರಪ್ಪ, ಪ್ರಮುಖರಾದ ಮಲ್ಲಪ್ಪ, ತೋಟಯ್ಯ, ಏಕಯ್ಯ, ಗವಿಸಿದ್ದಪ್ಪ, ದೇವೇಂದ್ರರಡ್ಡಿ ಇತರರಿದ್ದರು. 
ಜಿಲ್ಲೆ

ಶರಣರ ಆದರ್ಶಗಳನ್ನು ಪಾಲಿಸಿ

Kopala - Desk - Eraveni

ಅಳವಂಡಿ: ಅಕ್ಕಮಹಾದೇವಿ ಅವರ ವಚನಗಳು ಅಜ್ಞಾನದಿಂದ ಸುಜ್ಞಾನದ ದಾರಿ ತೋರಲು ಮತ್ತು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಸಹಕಾರಿಯಾಗಿವೆ ಎಂದು ಪಿಡಿಒ ಕೊಟ್ರಪ್ಪ ಅಂಗಡಿ ಹೇಳಿದರು.

ಗ್ರಾಪಂನಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಾಮಾಜಿಕ ಹಾಗೂ ರಾಜಪ್ರಭುತ್ವವನ್ನು ಏಕಕಾಲಕ್ಕೆ ದಿಕ್ಕರಿಸಿ ಲಿಂಗಭಾವವನ್ನು ಬೆಳೆಸಿಕೊಂಡ ಮಹಾನ್‌ತಾಯಿಯಾಗಿದ್ದಾರೆ.

ಇವರ ವಚನಗಳು ಸರ್ವರಲ್ಲಿ ಸಮಾನತೆಯ ಭಾವವನ್ನು ವ್ಯಕ್ತಪಡಿಸುತ್ತವೆ. ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪ್ರಮುಖರಾದ ಮಲ್ಲಪ್ಪ ಬೆಣಕಲ್, ತೋಟಯ್ಯ ಅರಳೆಲೆಮಠ, ಗವಿಸಿದ್ದಪ್ಪ ಭಜಂತ್ರಿ, ದೇವೇಂದ್ರರಡ್ಡಿ, ಏಕಯ್ಯ, ಹನುಮಂತ ಇತರರು ಇದ್ದರು.