ಬಳ್ಳಾರಿ: ಕರೊನಾ ಸೋಂಕು ತೊಲಗಿಸಲು ತಾಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ನೂರಾರು ಕೆ.ಜಿ ಅನ್ನ ತಯಾರಿಸಿ ಗ್ರಾಮದ ಸುತ್ತಲೂ ಚೆಲ್ಲಿದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ.
ಇದಕ್ಕೆ ಕಾರಣಿಭೂತರಾದವರ ವಿರುದ್ಧ ಕಾನೂನು ರಿತ್ಯಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ವಿದ್ಯಾವಂತ ಯುವಕರ ಪಡೆ ಆಗ್ರಹಿಸಿ ಮೋಕಾ ಪೊಲೀಸ್ ಠಾಣೆಗೆ ಬರೆದಿರುವ ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ; ಟ್ವಿಟರ್ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್ವುಡ್ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದಿರುವ 2ನೇ ನಟ..
ಭೂತ- ಪ್ರೇತಗಳಿಗೆ ಬೃಹತ್ ಅನ್ನ ಸಂರ್ತಪಣೆ ಮಾಡಿದರೇ ಕರೊನಾ ದೂರಾಗುತ್ತದೆ ಎಂಬ ಪರಿಕಲ್ಪನೆಯನ್ನ ಜನರಲ್ಲಿ ಉಂಟು ಮಾಡಿರುವುದರಿಂದ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇಂತಹ ಮೌಢ್ಯಾಚರಣೆಗೆ ಕುಮ್ಮಕ್ಕು ನೀಡಿದ ಗ್ರಾಮದ ಎಸ್.ವಿರೇಶಪ್ಪ, ಡಿ.ಗೋಪಾಲ್, ಕೂರೇರು ಲಕ್ಷ್ಮಣ, ಕಣ್ಯಯ್ಯನ ಮಗ ಚಿಕ್ಕ, ಡ್ರೈವರ್ ವೇಂಕಟೇಶ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವಕರ ಪಡೆಯೊಂದು ಆಗ್ರಹಿಸಿರೋದು ಚರ್ಚಗೆ ಗ್ರಾಸವಾಗಿದೆ.
ಆದರೆ, ಈ ಕುರಿತಂತೆ ಯಾರು ದೂರು ನೀಡಿಲ್ಲ ಎಂದು ಮೋಕಾ ಪೊಲೀಸ್ ಠಾಣೆಯ ಪಿಐ ತಿಳಿಸಿದ್ದಾರೆ.