ಜಿಲ್ಲೆ

Super specialty hospital ಕುಮಟಾದಲ್ಲಿ 25 ಎಕರೆ ಸರ್ಕಾರಿ ಜಮೀನು ನೀಡಲು ಮನವಿ

Uttara Kannada - Subash Hegde

ಕಾರವಾರ: ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super specialty hospital)  ನಿರ್ಮಾಣ ಮಾಡುವ ಯೋಜನೆ ಹೊಂದಿದ್ದು, 15 ಎಕರೆ ಸರ್ಕಾರಿ ಜಾಗ ನೀಡುವಂತೆ ಕುಮಟಾದ ಖ್ಯಾತ ವೈದ್ಯ ಹಾಗೂ ಕುಮಟಾ ಜಿ.ಎನ್.ಹೆಗಡೆ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (Super specialty hospital) ಕೂಗು ತುಂಬಾ ಇದೆ. ಜಿಲ್ಲೆಯ ಮದ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಕುಮಟಾದಲ್ಲಿ ಕಳೆದ 31 ವರ್ಷಗಳಿಂದ 50 ಹಾಸಿಗೆಗಳ ಕೆನರಾ ಹೆಲ್ತ್ ಕೇರ್ ಸೆಂಟರ್ ಆಸ್ಪತ್ರೆ ನಡೆಸುತ್ತಿದ್ದೇನೆ. ಟ್ರಸ್ಟ್ನ ಮೂಲಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಸೇವೆ ನೀಡುತ್ತಿದ್ದೇನೆ. 2021 ರಿಂದ ಜಿಲ್ಲೆಯ ಮೊದಲ ಗುರುಕುಲ ಮಾದರಿಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜ್ ನಡೆಸುತ್ತಿದ್ದೇನೆ.

Super specialty hospital

ಕುಮಟಾದಲ್ಲಿ ಇರುವ ಸರ್ವೇ ನಂಬರ್ 440/ಅ/ಬ ಹಾಗೂ ಸರ್ವೇ ನಂಬರ್ 440/ಅ/ಅ ಕ್ಷೇತ್ರದ ಒಟ್ಟು 25 ಎಕರೆ ಜಾಗವನ್ನು ಜಿ.ಎನ್.ಹೆಗಡೆ ಟ್ರಸ್ಟ್ಗೆ 99 ವರ್ಷ ಲೀಸ್‌ಗೆ ಸರ್ಕಾರ ಒದಗಿಸಿದರೆ ಅದರಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಬಂಡವಾಳದಿಂದ 3 ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಿದ್ದೇನೆ ಎಂದು ಡಾ.ಜಿ.ಜಿ.ಹೆಗಡೆ ತಿಳಿಸಿದರು. ಮಂಕಾಳ ವೈದ್ಯ ಅವರು ಚರ್ಚಿಸಿ ನಿರ್ಧರಿಸುವ ಭರವಸೆ ನೀಡಿದರು. ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಇದ್ದರು.