ಜಿಲ್ಲೆ

ಬೇಸಿಗೆ ಶಿಬಿರ ಕೌಶಲ ಪರ್ವ ಉದ್ಘಾಟನೆ

ಸೌಮ್ಯ ಆರ್

ಕಡಬ: ಕಡಬ ತಾಲೂಕು ಶ್ರೀ ರಾಮಕುಂಜೇಶ್ವರ ಆಂಗ್ಲ ವಾಧ್ಯಮ ಪ್ರೌಢಶಾಲೆಯಲ್ಲಿ ಬೆೇಸಿಗೆ ಶಿಬಿರ -2025 ಕೌಶಲ ಪರ್ವ ಉದ್ಘಾಟನೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ಪೆರಾಬೆ ಪ್ರಾಥಮಿಕ ಶಾಲಾ ಸಹ ಶಿಕ್ಷಕಿ ಹೇಮಲತಾ ಪ್ರದೀಪ್ ಶಿಬಿರ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ಕನ್ನಡ ವಾಧ್ಯಮ ಪ್ರೌಢಶಾಲಾ ನಿವೃತ್ತ ಶಿಕ್ಷಕ ಬಾಲಚಂದ್ರ ಮುಚ್ಚಿಂತಾಯ, ರಾಮಕುಂಜ ಕ್ಲಸ್ಟರ್ ಸಿ.ಆರ್.ಪಿ.ಮಹೇಶ್ ಎಂ. ಶುಭ ಹಾರೈಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ಶಿಕ್ಷಕ - ರಕ್ಷಕ ಸಂದ ಸದಸ್ಯ ಮನೋಹರ ಜೈನ್ ಅರಂತಬೈಲು, ವಿದ್ಯಾರ್ಥಿ ಪಾಲಕರಾದ ಜಯಶ್ರೀ ವಳಕಡಮ, ರವಿಕುವಾರ್ ಹೊಸಗದ್ದೆ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್. ಸ್ವಾಗತಿಸಿದರು. ಸಹಶಿಕ್ಷಕಿ ಸಂಧ್ಯಾ ನಿರ್ವಹಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತ ವಂದಿಸಿದರು.