ವಿಜಯವಾಣಿ ಸುದ್ದಿಜಾಲ ಬೈಂದೂರು
ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಅಪಾರ. ಈ ನಿಟ್ಟಿನಲ್ಲಿ ಉಪ್ಪುಂದ ಜೆಸಿಐ ಈ ಸಪ್ತಾಹದಲ್ಲಿ ಪ್ರೇಕ್ಷಕರಲ್ಲಿ ಹೊಸ ಅಭಿರುಚಿ ಮೂಡಿಸುವ ಹಾಗೂ ಹೆಚ್ಚು ಕಾಲ ನೆನಪಿನಲ್ಲಿಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಹೇಳಿದರು.
ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಸೋಮವಾರ ಆರಂಭಗೊಂಡ ಜೆಸಿಐ ಸಪ್ತಾಹ ‘ಸುಮನಸು ವಿಂಶತಿ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯುವಕರು ದೇಶದ ಅಮೂಲ್ಯ ಸಂಪತ್ತು, ಸುಸಂಸ್ಕೃತ ಸಮಾಜ ಕಟ್ಟುವ ಕಾರ್ಯದಲ್ಲಿ ಯುವ ಜನತೆ ಮನಸ್ಸು ಮಾಡಬೇಕು. ಸ್ವ-ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿ ಕಡೆಗೆ ಸದಾ ಚಿಂತನಾಶೀಲರಾಗಬೇಕು. ಸಮಾಜದ ಅನೇಕ ಕಾರ‌್ಯಗಳಲ್ಲಿ ಜೆಸಿಐ ಸಹಭಾಗಿತ್ವವಹಿಸುತ್ತಿದ್ದು, ಇದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅನುಕೂಲವಾಗಿದೆ ಎಂದರು.
ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ, ಉದ್ಯಮಿ ಎನ್.ರಮೇಶ ದೇವಾಡಿಗ ವಂಡ್ಸೆ ಅವರಿಗೆ ಸಾಧನಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಯಾನಂದ ಪಟಗಾರ್ ಮತ್ತು ಮಂಜುನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ, ದೇವಾಡಿಗ ಸಂಘದ ಗೌರವಾಧ್ಯಕ್ಷ ಜನಾರ್ದನ ದೇವಾಡಿಗ, ಉದ್ಯಮಿ ಯು.ಎ.ಮಂಜು ದೇವಾಡಿಗ, ಸಿನಿಯರ್ ಚೇಂಬರ್ ಅಧ್ಯಕ್ಷ ಅಚ್ಚುತ ಬಿಲ್ಲವ, ಸ್ಥಾಪಕಾಧ್ಯಕ್ಷ ಎನ್.ದಿವಾಕರ ಶೆಟ್ಟಿ, ಪೂವಾಧ್ಯಕ್ಷ ಪ್ರದೀಪ ಶೆಟ್ಟಿ ಕಾರಿಕಟ್ಟೆ, ರಾಮಕೃಷ್ಣ ದೇವಾಡಿಗ, ಗಿರೀಶ ಶ್ಯಾನುಭಾಗ್, ಕಾರ್ಯದರ್ಶಿ ನರಸಿಂಹ ದೇವಾಡಿಗ, ಸಪ್ತಾಹ ಸಭಾಪತಿ ಗುರುರಾಜ ಹೆಬ್ಬಾರ್, ಲೇಡಿ ಜೇಸಿ ಅಧ್ಯಕ್ಷೆ ಸುಮನಾ ಎಂ.ದೇವಾಡಿಗ, ಜ್ಯೂ.ಜೇಸಿ ಅಧ್ಯಕ್ಷೆ ಸಂಜನಾ, ಯೋಜನಾಧಿಕಾರಿ ಜಯರಾಜ್, ಸಂದೀಪ ನಾಯ್ಕ, ಚಂದ್ರ ದೇವಾಡಿಗ ಇದ್ದರು. ಶಿವಾನಂದ ಕೆರ್ಗಾಲ್ ವಂದಿಸಿದರು