ಕಾಸರಗೋಡು: ಬಿಹಾರ್ ನಿವಾಸಿ, ಕಡಂಬಾರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಕುಮಾರ್(19) ಎಂಬಾತ ಮಂಜೇಶ್ವರ ಕಡಂಬಾರ್‌ನ ಬಾಡಿಗೆ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆ. ಸೋಮವಾರ ಮಧ್ಯಾಹ್ನ ಸೂರಜ್ ಸ್ನೇಹಿತ ಆದಿತ್ಯ ಕುಮಾರ್ ಎಂಬಾತ ಕೊಠಡಿಗೆ ತೆರಳಿದ್ದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.