ಜಿಲ್ಲೆ

ಪತಿ, ಪತ್ನಿ ಜತೆಯಾಗಿ ನೇಣಿಗೆ ಶರಣು

ಸೌಮ್ಯ ಆರ್

ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಉರ್ದುಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ(63) ಹಾಗೂ ಅವರ ಪತ್ನಿ ಬೇಬಿ(46) ಮನೆ ಸಮೀಪದ ಕಾಡಿನಲ್ಲಿ ಗುರುವಾರ ಜತೆಯಾಗಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಣಯ್ಯ ಪೂಜಾರಿ ಅವರ ಮೊದಲ ಪತ್ನಿ 10 ವರ್ಷದ ಹಿಂದೆ ಮೃತಪಟ್ಟಿದ್ದು, ಬಳಿಕ ಬೇಬಿ ಅವರನ್ನು ವಿವಾಹವಾಗಿದ್ದರು. ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಿನಲ್ಲಿದ್ದರು. ನೋಣಯ್ಯ ಪೂಜಾರಿ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು. ವೇಣೂರು ಠಾಣೆಯಲ್ಕಿ ಪ್ರಕರಣ ದಾಖಲಾಗಿದೆ.