ಜಿಲ್ಲೆ

ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ : ಅನಾವಶ್ಯಕ  ಸುದ್ದಿಗಳಿಗೆ ತೆರೆ ಎಳೆದ ನಟ Sudeep

ಬೆಂಗಳೂರು:  ಖಾಸಗಿವಾಹಿಯಲ್ಲಿ ಪ್ರಸರವಾಗುತ್ತಿರುವ ಬಿಗ್​ಬಾಸ್​​ ( Bigg Boss ) ಕಾರ್ಯಕ್ರಮ  ಹೆಚ್ಚಿನ ಜನಮನ್ನಣೆ ಪಡೆದರಿರುವ ಕಾರ್ಯಕ್ರಮವಾಗಿ ಮನ್ನಣೆ ಪಡೆಯುತ್ತಿದೆ.  ಕಿಚ್ಚ ಸುದೀಪ್ ( Sudeep​ )​​ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್​ಬಾಸ್ ಕನ್ನಡ​ ಸೀಸನ್​​ 11ರ ನಂತರ ಮುಂದಿನ ಸೀಸನ್​ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್​ ಹೇಳಿದ್ದ ಬೆನ್ನಲ್ಲೆ ಕೆಲವು ಅಂತೆ ಕಂತೆ ಸುದ್ದಿಗಳು ಸೋಶಿಯಲ್​​ ಮೀಡಿಯಾದಲ್ಲಿ ಹಬ್ಬಿದ್ದವು. ಈ ಕುರಿತಾಗಿ ಸುದೀಪ್​ ಅವರೆ ಮತ್ತೆ ಟ್ವೀಟ್​​ ಮಾಡಿ ಸ್ಪಷ್ಟನೆ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್​ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್​ ಬಾಸ್​. ಇಷ್ಟು ವರ್ಷಗಳ ಕಾಲ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್​ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್​ ಅವರು ಶಾಕಿಂಗ್​ ವಿಷಯ ತಿಳಿಸಿದ್ದಾರೆ.

ಬಿಗ್​ಬಾಸ್​​ ಪ್ರಾರಂಭವಾಗಿ 2 ವಾರಕ್ಕೆ ಕಿಚ್ಚ ಮುಂದಿನ  ಸೀಸನ್​​ನಲ್ಲಿ ತಾವು ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿರುವುದು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಕೆಲವರು ಕಲರ್ಸ್​ ಕನ್ನಡ ವಾಹಿನಿ ಹಾಗೂ ಬಿಗ್​ಬಾಸ್​​ ತಂಡದ ವಿರುದ್ಧವಾಗಿ ಆಕ್ರೋಶ ಹೊರ ಹಾಕಿದ್ದರು. ಆದರೆ ಈ ಎಲ್ಲ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿರುವ ಬೆನ್ನಲ್ಲೇ ಸುದೀಪ್​ ಅವರು ಮತ್ತೆ  ಟ್ವೀಟ್​​ ಮಾಡಿ ಈ ಸುದ್ದಿಗೆ ಸ್ಪಷ್ಟನೆ ನೀಡುವುದರ ಜತೆ ತೆರೆ ಎಳೆದಿದ್ದಾರೆ.

ಸುದೀಪ್​ ಅವರ ಟ್ವೀಟ್​​ನಲ್ಲಿ ಏನಿದೆ?: 

ಇಂದು ಮಧ್ಯಾಹ್ನ 12.04 ಗಂಟೆಯ ಸುಮಾರಿಗೆ ಒಂದು ಟ್ವೀಟ್ ಮಾಡಿರುವ ಸುದೀಪ್. ನನ್ನ ಒಂದು ಟ್ವೀಟ್​ಗೆ ನೀವು ಸ್ಪಂದಿಸಿರುವ ರೀತಿಗೆ ಹಾಗೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ನಾನು ಮೆಚ್ಚುತ್ತೇನೆ. ಆದರೆ ನನ್ನ ಹಾಗೂ ಚಾನೆಲ್​ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೆ. ನಾವು ಒಂದು ದೀರ್ಘವಾದ ಹಾಗೂ ಧನಾತ್ಮಕ ಪ್ರಯಾಣವೊಂದನ್ನು ಮಾಡಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದರ ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ ಮತ್ತು ಮಾಹಿತಿ ಕೊರತೆಯಿಂದ ಕೂಡಿವೆ . ನನ್ನ ಒಂದು ಟ್ವೀಟ್ ಅತ್ಯಂತ ಪ್ರಾಮಾಣಿಕವಾಗಿದ್ದು. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿಂದ್ದಾರೆ. ಡೈರೆಕ್ಟರ್ ಪ್ರಕಾಶ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ವ್ಯಕ್ತಿ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ.

ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದವನ್ನು ಎದುರಿಸುತ್ತಿರುವಾಗ ನಾನು ಹಿಂದೆ ಕುಳಿತುಕೊಂಡು ನೋಡುತ್ತಾ ಸಂಭ್ರಮಿಸುವವರ ಪಟ್ಟಿಗೆ ಸೇರಿದ ವ್ಯಕ್ತಿ ಅಲ್ಲ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಸುದೀಪ್ ತೆರೆ ಎಳೆದಿದ್ದಾರೆ.