ಬೆಂಗಳೂರು: ಭಾರತೀಯ ಮಾನಕ ಬ್ಯುರೋ (ಬಿಐಎಸ್) ವತಿಯಿಂದ ಸರ್ಕಾರಿ ಪಿಯು ಕಾಲೇಜಿನ ಪ್ರಾಧ್ಯಾಪಕರಿಗೆ "ಪ್ರಮಾಣಿತಗಳ ಮೂಲಕ ವಿಜ್ಞಾನ ಕಲಿಕೆ 'ಕುರಿತು ಕಾರ್ಯಗಾರ ಆಯೋಜಿಸಲಾಗಿತ್ತು.
ಶಿಕ್ಷಣ ವ್ಯವಸ್ಥೆಯ ಬಲವರ್ಧನೆ, ನವೀನ ಬೋಧನಾ ವಿಧಾನ, ಶಿಕ್ಷಣ ತಜ್ಞರಿಗೆ ಪರಿಣಾಮಕಾರಿ ಕಾರ್ಯನಿರ್ವಹಿಸಲು ಇಂತಹ ಕಾರ್ಯಕ್ರಮಗಳಿಂದ ಅನುಕೂಲವಾಗಲಿದೆ ಎಂದು ಸಮಾರೋಪದಲ್ಲಿ ಸರ್ಕಾರಿ ಪಿಯು ಮಂಡಳಿ ಸಹಾಯ ನಿರ್ದೇಶಕ ಪಿ. ಆನಂದ್ ಹೇಳಿದರು. ವಿದ್ಯಾರ್ಥಿಗಳನ್ನು ಉತ್ಕೃಷ್ಟಗೊಳಿಸಲು ಇಂತಹ ಉಪಕ್ರಮ ಅಗತ್ಯ. ವಿನೂತನ ವಿಧಾನ ಮೂಲಕ ಹೊಸ ವಿಷಯ ಕಲಿಕೆಗೆ ಸಾಧ್ಯವಾಗುತ್ತದೆ ಎಂದರು.
ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಮಾನದಂಡ ಪರಿಕಲ್ಪನೆಗೆ ನಮ್ಮ ಸಂಸ್ಥೆ ಬದ್ಧವಾಗಿದೆ. ದೈನಂದಿನ ಜೀವನದಲ್ಲಿ ಗುಣಮಟ್ಟದ ಪ್ರಾಮುಖ್ಯತೆ ಗುರುತಿಸುವ, ವೈಜ್ಞಾನಿಕವಾಗಿ ವಿದ್ಯಾರ್ಥಿಗಳನ್ನು ಬೆಳೆಸುವ ಗುರಿ ಹೊಂದಿದೆ ಎಂದು ಬಿಐಎಸ್ ಬೆಂಗಳೂರು ಟಕ ನಿರ್ದೇಶಕ ನರೇಂದ್ರರ್ ರೆಡ್ಡಿ ಬೀಸು ಹೇಳಿದರು. ಹಲವು ಪ್ರಾಧ್ಯಾಪಕರಿಗೆ ಪ್ರಮಾಣಪತ್ರ ವಿತರಣೆ ನೀಡಿ ಸನ್ಮಾನಿಸಲಾಯಿತು.