ಕೋಟತಟ್ಟು ಪಡುಕರೆಯಲ್ಲಿ ಟೀಮ್ ಭವಾಬ್ದಿಯ ನಾಲ್ಕನೆ ವರ್ಷದ ಕಡಲೂರ ಸನ್ಮಾನ ಕಾರ್ಯಕ್ರಮದಲ್ಲಿ ಸಮಾಜಸೇವಕ ಈಶ್ವರ್ ಮಲ್ಪೆ ಅವರನ್ನು ಗೌರವಿಸಲಾಯಿತು.  
ಜಿಲ್ಲೆ

ಕ್ರಿಯಾಶೀಲತೆಯಿಂದ ಸಂಸ್ಥೆಗಳಿಗೆ ಯಶಸ್ಸು

Karthika K.S

ಕೋಟ: ಸಂಘ ಸಂಸ್ಥೆಗಳು ನಿರಂತರ ಕ್ರಿಯಾಶೀಲತೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಹೊಂದಿರಬೇಕು. ಇದರಿಂದ ಸಂಘ ಸಂಸ್ಥೆಗಳು ಎತ್ತರಕ್ಕೆ ಬೆಳೆಯುತ್ತವೆ ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.

ಶನಿವಾರ ಕೋಟತಟ್ಟು ಪಡುಕರೆಯಲ್ಲಿ ಟೀಮ್ ಭವಾಬ್ದಿಯ ನಾಲ್ಕನೆ ವರ್ಷದ ಕಡಲೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಸಮಾಜಸೇವಕ ಈಶ್ವರ್ ಮಲ್ಪೆ ಅವರಿಗೆ ಕಡಲೂರ ಸನ್ಮಾನ ನೆರವೇರಿಸಲಾಯಿತು. ಟೀಮ್ ಭವಾಬ್ದಿ ಅಧ್ಯಕ್ಷ ಸಂತೋಷ ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಎನ್ ಶಂಕರ್ ಪೂಜಾರಿ, ಐರೋಡಿ ವಿಠ್ಠಲ್ ಪೂಜಾರಿ, ಶ್ರೀಕಾಂತ್ ಶೆಣೈ, ಸತೀಶ್ ಕುಂದರ್, ಎಚ್.ಪ್ರಮೋದ್ ಹಂದೆ, ಸಂಜೀವ ಗುಂಡ್ಮಿ ಉಪಸ್ಥಿತರಿದ್ದರು. ರವೀಂದ್ರ ತಿಂಗಳಾಯ ಪ್ರಸ್ತಾವನೆಗೈದರು. ಗಣೇಶ್ ತಿಂಗಳಾಯ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು.