ಜಿಲ್ಲೆ

ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ

Avinash R

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಪುಂಜಾಲಕಟ್ಟೆ ವಲಯದ ಕರ್ಲ ಕಾರ್ಯಕ್ಷೇತ್ರದ ಮಹಾದೇವ ದೇವೇಶ್ವರ ಸಂಘದ ದಯಾನಂದ, ಕೊರಗಪ್ಪ ಅವರ ಮನೆಗೆ ತೀವ್ರ ಮಳೆಯಿಂದ ಗುಡ್ಡ ಕುಸಿದು ಬಿದ್ದು ಹಾನಿಯಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ಸಹಾಯಧನದ ಚೆಕ್ ಹಸ್ತಾಂತರ ಮಾಡಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ವಲಯ ಮೇಲ್ವಿಚಾರಕಿ ಸವಿತಾ, ಒಕ್ಕೂಟದ ಪದಾಧಿಕಾರಿ ಕವಿತಾ, ಸೇವಾಪ್ರತಿನಿಧಿ ಉಷಾ ಉಪಸ್ಥಿತರಿದ್ದರು.