ಜಿಲ್ಲೆ

ಸುಬ್ರಹ್ಮಣ್ಯ ದೇವಿ ದೇವಸ್ಥಾನದಲ್ಲಿ ಸಡಗರದ ಜಾತ್ರೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಶ್ರೀ ವನದುರ್ಗಾ ದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಭಕ್ತಿ ಸಡಗರದಿಂದ ನಡೆಯಿತು. ಈ ಪ್ರಯುಕ್ತ ಶ್ರೀ ದೇವಿಯ ವೈಭವದ ರಥೋತ್ಸವ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.

ಮಹಾಪೂಜೆ ಬಳಿಕ ಶ್ರೀ ದೇವಿಯ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವಗಳು ನಡೆದವು. ನಂತರ ವಿವಿಧ ಸಂಗೀತ ಸುತ್ತುಗಳು ನೆರವೇರಿದವು. ಬೆಳಗ್ಗೆ ಚಂಡಿಕಾ ಹೋಮ ಮತ್ತು ಅನ್ನಸಂತರ್ಪಣೆ ನೆರವೇರಿದ್ದು, ಶ್ರೀ ದೇವಳದ ಪ್ರಧಾನ ಅರ್ಚಕ ಶ್ರೀಕರ ಉಪಾಧ್ಯಾಯ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಪುರೋಹಿತ ಚೇತನ ಶಾಸ್ತ್ರಿ ಸಹಕರಿಸಿದರು. ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವಿಗೆ ದೀಪಾಲಂಕೃತ ರಂಗಪೂಜೆ, ಮಹಾಪೂಜೆ, ಸಂಗೀತಮಯ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು.

ಮಠದ ದಿವಾನ ಸುದರ್ಶನ ಜೋಯಿಸ, ಕಲಾವಿದ ಕೆ.ಯಜ್ಞೇಶ್ ಆಚಾರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದು, ಶ್ರೀ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.